ಹನೂರು: ತಾಲೂಕಿನ ಕೌದಳ್ಳಿ ಸಮೀಪದ ಕಾಕ್ಕೆಹಳ್ಳ ಹತ್ತಿರ ಸೂಪರ್ ಎಕ್ಸೆಲ್ ಬೈಕ್- ಪಿಕಪ್ ವಾಹನ ಡಿಕ್ಕಿ ಸವಾರರು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹನೂರು ತಾಲೂಕಿನ ಹಳೆ ಮಾರ್ಟಳ್ಳಿಯ ಯುವರಾಜ್ (50) ಹಾಗೂ ಮದ್ದೂರು ತಾಲೂಕಿನ ಎಡಕೋಡಹಳ್ಳಿ ಗ್ರಾಮದ ಶಶಾಂಕ್ (25) ಮೃತದುರ್ದೈವಿ.
ಇವರು ಕಾರ್ಯನಿಮಿತ್ತ ವಡಕೆಹಳ್ಳದಿಂದ ಕೌದಳ್ಳಿ ಗ್ರಾಮಕ್ಕೆ ಬರುವ ಸಂದರ್ಭದಲ್ಲಿ ಕೌದಳ್ಳಿ ಕಾಕ್ಕೆಹಳ್ಳದ ಹತ್ತಿರ ಎದುರು ನಿಂದು ಬಂದ ಮಹೇಂದ್ರ ಪಿಕಪ್ ವಾಹನವು ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ರಭಸಕ್ಕೆ ತಲೆಯ ಭಾಗವು ಉಜ್ಜಿಕೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮಾಪುರ ಪೊಲೀಸ್ ಠಾಣಾಧಿಕಾರಿ ಹಾಗೂ ಕೊಳ್ಳೇಗಾಲ ವಿಭಾಗೀಯ ಡಿವೈಎಸ್ಪಿ . ಅಡಿಷನಲ್ಎಸ್ಪಿ ಮತ್ತು ಸಿಬ್ಬಂದಿವರ್ಗ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಹನೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರತಿನಿತ್ಯ ಸಾವಿರಾರು ಭಕ್ತರು ಮಲೈ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ ಹನೂರು ನಿಂದ ಕೌದಳ್ಳಿ ಗ್ರಾಮ ಉದ್ದಕ್ಕೂ ಯಾವುದೇ ಸೂಚನಾ ಫಲಕ. ರಸ್ತೆಯ ಹಮ್ಸ್ ಇಲ್ಲದಿರುವುದು. ತಿರುವಿನ ಬಗ್ಗೆ ಯಾವುದೇ ಎಚ್ಚರಿಕೆಯ ಫಲಕಗಳು ಸಹ ಇಲ್ಲ.
ಅತ್ಯಂತ ನೋವಿನ ಸಂಗತಿ ಎಂದರೆ ರಸ್ತೆ ಅಪಘಾತದಿಂದ ಎರಡು ತಿಂಗಳಿನಿಂದ ಬರೋಬ್ಬರಿ ಮೂರು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದು. ಅವರ ಕುಟುಂಬಕ್ಕೆ ದಿಕ್ಕು ಇಲ್ಲದಂತಾಗಿದೆ ಇಷ್ಟೊಂದು ಅಪಘಾತಗಳು ಸಂಭವಿಸುತ್ತಿದ್ದರು ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ
ವರದಿ ನೂರುಲ್ಲಾ ಕೌದಳ್ಳಿ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.