ಕೊಳ್ಳೇಗಾಲ- ನಮ್ಮ ರಾ ಪವರ್ 28 ವೆಬ್ ಸೈಟ್ ನಲ್ಲಿ ದೇವಾಂಗ ಸಮುದಾಯದ ವಿದ್ಯಾರ್ಥಿಗಳಿಗೆ ಮಂಜೂರಾದ ವಿದ್ಯಾರ್ಥಿ ನಿಲಯದ ಭೂಮಿ ಎಲ್ಲಿ ಎಂಬ ಲೇಖನ ಪ್ರಕಟವಾದ ಬೆನ್ನಲ್ಲೇ ಮಹತ್ವದ ವಿಚಾರವೊಂದು ತಿಳಿದು ಬಂದಿದೆ.
7-7-26 ರಂದು ಚಾಮರಾಜನಗರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುಂಡಾಲ್ ಜಲಾಶಯ ಮತ್ತು ಕಾಲುವೆಗಳ ಒತ್ತುವರಿ ಮತ್ತು ಅಭಿವೃದ್ಧಿ ಸಂಬಂಧಿಸಿದಂತೆ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ತಾಲೂಕಿನ ತಹಶಿಲ್ದಾರ್ ಮತ್ತು ಅಧಿಕಾರಿಗಳು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಒತ್ತುವರಿ ಆಗಿರುವ ಕೊಳ್ಳೇಗಾಲ ತಾಲ್ಲೂಕಿನ ಕೆರೆಗಳ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಕೊಂಗಳಕೆರೆ ವ್ಯಾಪ್ತಿಯಲ್ಲಿ ನಿರ್ಮಾಣ ಆಗಿರುವ ಅಚ್ಗಾಳ್ ಯಾತ್ರಿ ನಿವಾಸದ ಬಗ್ಗೆಯೂ ಚರ್ಚೆ ಆಗಿದೆ.
ಆಗ ತಹಶೀಲ್ದಾರ್ ಅವರು ಮಾತನಾಡಿ, ಸದರಿ ಜಾಗವು ದೇವಾಂಗ ವಿದ್ಯಾರ್ಥಿ ನಿಲಯಕ್ಕೆ ಹಂಚಿಕೆಯಾಗಿರುತ್ತದೆ ಆದರೆ ಆ ಜಾಗದಲ್ಲಿ ಅಚ್ಗಾಳ್ ಹೋಟೆಲ್ ಕಟ್ಟಡ ಆಗಿರುತ್ತದೆ ಇದು ನಗರಸಭೆ ವತಿಯಿಂದ ತೆರುವು ಗೊಳಿಸಬೇಕಿದೆ ಎಂದು ಸಭೆಯ ಗಮನಕ್ಕೆ ತಂದಿದ್ದಾರೆ.
ಆಗ ನಗರಸಭೆ ಆಯುಕ್ತರು ಮಾತನಾಡಿ, ನೋಟೀಸ್ ನೀಡಲಾಗಿದೆ. ಸದರಿಯವರಿಂದ ದಾಖಲೆಗಳನ್ನು ಪಡೆದು ಕ್ರಮವಹಿಸುವುದಾಗಿ ಸಭೆಗೆ ತಿಳಿಸಿದ್ದಾರೆ.
ನಂತರ ಜಿಲ್ಲಾಧಿಕಾರಿಗಳು ಮಾತನಾಡಿ, ಸದರಿ ಜಾಗವು ದೇವಾಂಗ ವಿದ್ಯಾರ್ಥಿ ನಿಲಯಕ್ಕೆ ಹಂಚಿಕೆಯಾಗಿರುವುದರಿಂದ ಹಾಗೂ ಕೆರೆ ಒತ್ತುವರಿ ಮಾಡಿ ಕೊಂಡಿರುವುದರಿಂದ ಲಬ್ಯವಿರುವ ದಾಖಲೆಗಳ ಆಧಾರದ ಮೇಲೆ ಕ್ರಮವಹಿಸಬೇಕಿದ್ದು,ನೋಟೀಸ್ ಜಾರಿ ಮಾಡಿ ವಿಳಂಬ ನೀತಿ ಅನುಸರಿಸದೇ ಈ ಕೂಡಲೇ ವಿದ್ಯುತ್ ಮತ್ತು ನೀರಿನ ಸರಬರಾಜನ್ನು ಕಡಿತಗೊಳಿಸಲು ಅಗತ್ಯ ಕ್ರಮವಹಿಸಲು ಸೂಚಿಸಿರುವುದಾಗಿ ತಿಳಿದು ಬಂದಿದೆ.
ಆದರೆ ನಗರಸಭೆ ಅಧಿಕಾರಿಗಳು ಇನ್ನೂ ಯಾಕೆ ಕ್ರಮಕ್ಕೆ ಮುಂದಾಗಿಲ್ಲ ಎನ್ನುವುದೇ ನಿಗೂಢವಾಗಿದೆ.
ವರದಿ- ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.