ಕೊಳ್ಳೇಗಾಲ- ಸುಮಾರು 50- 60 ವರ್ಷಗಳ ಹಿಂದೆಯೇ ಕೊಳ್ಳೇಗಾಲ ದೇವಾಂಗ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಕ್ಕೆ ಕೊಳ್ಳೇಗಾಲ ತಾಲ್ಲೂಕು ಬೋರ್ಡ್ ವತಿಯಿಂದ 1 ಎಕರೆ 14ಸೆಂಟು ಭೂಮಿ ಮಂಜುರಾಗಿದೆ.
ವಿಪರ್ಯಾಸವೆಂದರೆ ಇದುವರೆಗೂ ದೇವಾಂಗ ಸಮುದಾಯದ ವಿದ್ಯಾರ್ಥಿ ನಿಲಯಕ್ಕೆ ಮಂಜೂರಾದ ಭೂಮಿಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಆಗಿಲ್ಲ. ಅದು ಬಿಡಿ ಆ ನಿವೇಶನ ಎಲ್ಲಿದೆ ಎಂಬುದೇ ಇದೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಕೊಳ್ಳೇಗಾಲ ಪಟ್ಟಣದಲ್ಲಿ ದೇವಾಂಗ ಸಮುದಾಯ ಪ್ರಬಲವಾದ ಕೋಮು ಆಗಿದೆ. ದೊಡ್ಡ ದೊಡ್ಡ ಉದ್ಯಮಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಮುದಾಯದಲ್ಲಿ ಇದ್ದಾರೆ.ಆದರೆ ಅವರ್ಯಾರು ಇದುವರೆಗೂ ತಮ್ಮ ಸಮುದಾಯದ ಮಕ್ಕಳಿಗೆ ಮಂಜುರಾದ ನಿವೇಶನದ ಬಗ್ಗೆ ಚಕಾರ ಎತ್ತದಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.
ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ಕೊಳ್ಳೇಗಾಲ ಸರ್ವೆ ನಂಬರ್ 746a, 748a, 749a ರಲ್ಲಿ 1 ಎಕರೆ 14 ಭೂಮಿಯನ್ನು ದೇವಾಂಗ ಸಮುದಾಯದ ವಿಧ್ಯಾರ್ಥಿಗಳಿಗೆ ಮಂಜೂರಾಗಿದೆ ಎಂದು ತಿಳಿದು ಬರುತ್ತದೆ. ಇದರನ್ವಯ ದಿಶಾಂಕ್ ನಲ್ಲಿ ಪರಿಶೀಲನೆ ನಡೆಸಿದರೆ...ಹಾಲಿ ಅಚ್ಗಾಳ್ ಯಾತ್ರಿ ನಿವಾಸದಲ್ಲಿ ದೇವಾಂಗ ಸಮುದಾಯದ ವಿದ್ಯಾರ್ಥಿಗಳಿಗೆ ಮಂಜೂರಾದ ನಿವೇಶನ ಕಂಡು ಬರುತ್ತಿದೆ.
ಅಚ್ಗಾಳ್ ಯಾತ್ರಿ ನಿವಾಸ್ ಸ್ಥಳವೇ ವಿದ್ಯಾರ್ಥಿ ನಿಲಯದ ನಿವೇಶನವೇ ಎಂಬುದನ್ನು ಜಿಲ್ಲಾಧಿಕಾರಿಗಳು ಲಬ್ಯ ದಾಖಲೆಗಳ ಮೂಲಕ ಪರಿಶೀಲನೆ ನಡೆಸಬೇಕಿದೆ.
ಈ ಹಿಂದೆ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಆಗಿದ್ದ ಬಸವರಾಜು ಅವರು ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ನಿರ್ಮಾಣ ಗೊಂಡಿರುವ ಅಚ್ಗಾಳ್ ಯಾತ್ರಿ ನಿವಾಸ್ ಸ್ಥಳದ ಬಗ್ಗೆ ಮೂಲ ದಾಖಲಾತಿ ಇಲ್ಲ ಎಂಬುದನ್ನು ಉಲ್ಲೇಖಿಸಿದ್ದರು.
ಹಾಲಿ ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜು ಅವರು ಸಹ ನೋಟೀಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಹೋರಾಟಗಾರ ದಶರಥ್ ಸಹ ಜಿಲ್ಲಾಧಿಕಾರಿ ಗಳಿಗೆ ದೂರು ನೀಡಿದ್ದು,ದೇವಾಂಗ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಕ್ಕೆ ಮಂಜೂರಾಗಿರುವ ಭೂಮಿಯನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.
ವರದಿ- ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.