ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ವ್ಯಕ್ತಿಗೆ ಬೈಕ್ ಸವಾರ ಡಿಕ್ಕಿ ಕಾಲು ಮುರಿತ
ಹನೂರು: ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುನಾಗರದಲ್ಲಿ ಬೆಳಗ್ಗೆ 9:30ಕ್ಕೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ 60 ವರ್ಷದ ಜಡಿಯಪ್ಪ (ಅಂಗವಿಕಲ ಕುರುಡ) ಎಂಬವರಿಗೆ ಇದೇ ಊರಿನ ಜಗದೀಶ್ ಬೈಕ್ ಸವಾರ ಗುದ್ದಿ ಕಾಲಿನ ಮೂಳೆ ಮುರಿತುಕೊಂಡಿದ್ದು. ಸ್ಥಳಿಯರು ತುರ್ತು ಸೇವೆ 112 ಕಾಲ್ ಮಾಡಿ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿ ಪರಿಶೀಲನೆ ನಡೆಸಿದರು
ಅಪಘಾತಕ್ಕೆ ಒಳಗಾದ ಜಡಿಯಪ್ಪ ಹನೂರು ತಾಲೂಕಿಗೆ ಚಿರಪರಿಚಿತವಾಗಿದೆ ವ್ಯಕ್ತಿ ಖಾಸಗಿ ಬಸ್'ಗಳಲ್ಲಿ ಕನ್ನಡ. ತಮಿಳು .ಸಿನಿಮಾ ಹಾಡುಗಳನ್ನು ಹಾಡುತ್ತಾ ಪ್ರಾಮಾಣಿಕರು ಕೋಡುವಂತಹ ಹಣದಲ್ಲಿ ಜೀವನ ಸಾಗಿಸುತ್ತಿದ್ದರು.
ಒಂದು ತಿಂಗಳ ಮುಂಚೆ ಇದೆ ಸ್ಥಳದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಮದ್ದೂರು ತಾಲೂಕಿನ ಮಹಿಳೆಯು ಅಪರಿಚಿತ ವಾಹನವು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರತಿನಿತ್ಯ ಸಾವಿರಾರು ಭಕ್ತರು ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಸಂದರ್ಭದಲ್ಲೂ ಸಹ ಅಪಘಾತಗಳು ಸಂಭವಿಸುತ್ತಿದ್ದು ಅಪಘಾತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆಗಾಗಿ ಕೊಳ್ಳೇಗಾಲಕ್ಕೆ ಇಲ್ಲಾಂದ್ರೆ ಮೈಸೂರಿಗೆ ಹೋಗುವ ಪರಿಸ್ಥಿತಿ ಇದ್ದು. ಈ ಸಮಸ್ಯೆಗಳಿಗೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನು ಪರಿಹರಿಸಿ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ವರದಿ- ನೂರುಲ್ಲಾ ಕೌದಳ್ಳಿ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.