ಕೊಳ್ಳೇಗಾಲ ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕೊಳ್ಳೇಗಾಲಕ್ಕೆ ಆಗಮಿಸಿದ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು
ಕೊಳ್ಳೇಗಾಲ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಪುತ್ತಳಿಗೆ ಸಚಿವ ಪುಟ್ಟರಂಗಶೆಟ್ಟಿ ಅವರು ಮಾಲಾರ್ಪಣೆ ಮಾಡಿದರು ಇದಕ್ಕೂ ಮೊದಲು ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಪುಟ್ಟರಂಗಶೆಟ್ಟಿ ಅವರಿಗೆ ಶಾಲು ಹಾಕಿ ಆತ್ಮೀಯವಾಗಿ ಗೌರವಿಸಿದರು
ಈ ಸಂದರ್ಭದಲ್ಲಿ ಶಾಸಕ ಕೃಷ್ಣಮೂರ್ತಿ ಮತ್ತು ಸಚಿವ ಪುಟ್ಟರಂಗಶೆಟ್ಟಿ ಅವರು ಪರಸ್ಪರ ಒಬ್ಬರನ್ನೊಬ್ಬರು ನೋಡಿಕೊಂಡರು ಆದರೆ ಇಬ್ಬರ ನಡುವೆ ಯಾವುದೇ ಮಾತುಕತೆಗಳು ನಡೆಯಲಿಲ್ಲ ಇಬ್ಬರ ನಡುವೆಯೂ ಮೌನವೇ ಎದ್ದು ಕಾಣುತ್ತಿತ್ತು
ಶಾಸಕ ಕೃಷ್ಣಮೂರ್ತಿ ಅವರು ತಮಗೆ ಸಚಿವ ಸ್ಥಾನ ಸಿಗದಿದ್ದರೂ ಸಹ ಮನದಲ್ಲಿ ಎಷ್ಟೇ ನೋವಿದ್ದರೂ ಅದನ್ನು ಹೊರಹಾಕದೆ ಸಚಿವ ಪುಟ್ಟರಂಗಶೆಟ್ಟಿ ಜೊತೆ ಆತ್ಮೀಯವಾಗಿ ಇದ್ದರು ಆದರೆ ಪುಟ್ಟರಂಗಶೆಟ್ಟಿಅವರಿಂದ ಅಂತಹ ಉತ್ತಮ ಪ್ರತಿಕ್ರಿಯೆ ಇರಲಿಲ್ಲ ಮೌನವಾಗಿಯೇ ಕಡೆವರೆಗೂ ಇದ್ದರು ಈ ನಡುವೆ ಪತ್ರಕರ್ತರು ಕೇಳಿದ ಕೆಲವು ಪ್ರಶ್ನೆಗಳಿಗೆ ನಗುನಗುತ್ತಲೆ ಪುಟ್ಟರಂಗಶೆಟ್ಟಿಯವರು ಉತ್ತರಿಸಿದರು
ಸಚಿವ ಪುಟ್ಟರಂಗಶೆಟ್ಟಿ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು ಅವರ ಅಪಾರ ಬೆಂಬಲಿಗರು ಹಾರ ಶಾಲುಗಳನ್ನು ಹಾಕಿ ಬರಮಾಡಿಕೊಂಡರು
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.