ಕೊಳ್ಳೇಗಾಲ. ಸರ್ಕಾರಿ ಎಂ.ಜಿ.ಎಸ್.ವಿ ಕಾಲೇಜು ಪ್ರಾಂಶುಪಾಲರಾದ ಜಿ.ದಾಕ್ಷಾಯಿಣಿ ಅವರು ವಯೋನಿವೃತ್ತಿ ಹೊಂದಿದ್ದ ಹಿನ್ನಲ್ಲೆ ಇಂದು ಸನ್ಮಾನಿಸಿ ಬೀಳ್ಕೋಡುಗೆ ಸಲ್ಲಿಸಿದರು.
ಪಟ್ಟಣದ ಕಾಲೇಜುನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕರಿಗೆ ಶಾಲು, ಹಾರ ಹಾಕಿ ನೆನಪಿನ ಕಾಣಿಕೆ ನೀಡುವ ಮೂಲಕ ಬೀಳ್ಗೋಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲರಾದ ದ್ರಾಕ್ಷಿಯಿಣಿ ಮಾತನಾಡಿ, ನಾನು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಕಲಿತ ಸಂಸ್ಥೆಗಳಾದ ಎಸ್.ವಿ.ಕೆ ಕಾಲೇಜು, ಎಂಜಿಎಸ್ವಿ ಕಾಲೇಜು, ಮಹದೇಶ್ವರ ಕಾಲೇಜುಗಳಲ್ಲಿ
ಉಪನ್ಯಾಸಕಿಯಾಗಿ, ಪ್ರಾಚರ್ಯರಾಗಿ ನಿರಂತರವಾಗಿ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿರುವುದು ನನಗೆ ಸಂತಸ ತಂದಿದೆ. ಕಳೆದ 32 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿದ್ದು ಉಪನ್ಯಾಸಕರು, ಸಹದ್ಯೋಗಿಳು ಹಾಗೂ ಸಮಾಜದ ಜನರ ಸಹಕಾರದ ಜೊತೆ ಕರ್ತವ್ಯವನ್ನು ನಿರ್ವಹಿಸಿದ್ದೇನೆ. 
ನನ್ನ ಎಲ್ಲಾ ಸನ್ಮಿತ್ರರು ಮಿತ್ರರು, ವಿದ್ಯಾರ್ಥಿಗಳು ಉಪನ್ಯಾಸ ಕುಟುಂಬ ವರ್ಗ ಹಾಗೂ ಸಮಾಜದ ಗಣ್ಯರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ. ಇಷ್ಟು ವರ್ಷಗಳ ಕಾಲ ಶಿಕ್ಷಣದ ಸೇವೆ ಸಲ್ಲಿಸಿದ್ದೇನೆ, ಮುಂದಿನ ದಿನಗಳಲ್ಲಿ ಸಮಾಜ ಸೇವೆಗಾಗಿ ನನ್ನ ಜೀವನವನ್ನು ಮುಡಿಪಿಡುತ್ತೇನೆ. ಸಾಮಾಜಿಕವಾಗಿ, ರಾಜಕೀಯವಾಗಿ ಕೊಳ್ಳೇಗಾಲದ ಜನಸೇವೆ ನನ್ನ ಜೀವನವನ್ನು ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ  ಕಾಲೇಜು ಉಪನ್ಯಾಸಕರು ಪಿ.ಪ್ರಸಾದ್, ಎ.ಮಾಣಿಕ್ಯಂ, ಪ್ರಕಾಶ್, ಮಹದೇವ ಪ್ರಸಾದ್, ಸುಂದರ್, ಮಾದೇಶ್, ಸಾನ್ವಿ, ಸಿಬ್ಬಂದಿ ವರ್ಗ ಹಾಗೂ ಇತರರು ಇದ್ದರು.
ವರದಿ ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.