ಕೊಳ್ಳೇಗಾಲ. ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ರವರ ಜನ್ಮದಿನವನ್ನು ಇಲ್ಲಿನ ಜಿಲ್ಲಾಘಟಕ ವತಿಯಿಂದ ಸರಳವಾಗಿ ಆಚರಣೆ ಮಾಡಿದರು.
ಪಟ್ಟಣದ ಹೊರವಲಯದ ಎಸ್‌ಡಿಎ ವಾಕ್ ಮತ್ತು ಶ್ರವಣ ನ್ಯೂನತೆಯ ವಸತಿ ಶಾಲೆಯಲ್ಲಿ ಮಕ್ಕಳೊಂದಿಗೆ ಜಿಲ್ಲಾಧ್ಯಕ್ಷರು ಮೊಹಮ್ಮದ್ ಜಕಾವುಲ್ಲಾ ಕೇಕ್ ಕತ್ತರಿಸುವ ಮೂಲಕ ಆಚರಿಸಿ ಬಳಿಕ ಮಾತನಾಡಿದ ಅವರು, ನಮ್ಮ ವೇದಿಕೆಯ ರಾಜ್ಯಾಧ್ಯಕ್ಷರಾದ ಜೆ.ಶ್ರೀನಿವಾಸ್ ರವರ ಆದೇಶದಂತೆ, ರಾಜ್ಯದಲ್ಲಿ ಮಳೆಯಾಗದೇ ಬರ ಆವರಿಸಿದ್ದರಿಂದ ರೈತರು ಜಾನುವಾರು ಹಾಗೂ ಪ್ರಾಣಿ ಪಕ್ಷಿಗಳು ಸಂಕಷ್ಟ ಎದುರುಸುತ್ತಿದರಿಂದ ಸಂಭ್ರಮಾಚರಣೆ ಬೇಡ ಎಂದ ಕಾರಣ ನಮ್ಮ ಜಿಲ್ಲಾ ಘಟಕದ ವತಿಯಿಂದ ಅವರ ಹುಟ್ಟುಹಬ್ಬವನ್ನು ಸರಳವಾಗಿ ಮಕ್ಕಳೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರು ಮೊಹಮ್ಮದ್ ಜಕಾವುಲ್ಲಾ,ಪ್ರಧಾನ ಕಾರ್ಯದರ್ಶಿ ರಾಜೇಶ್ ಮಹಾಜನ್,ಉಪಾಧ್ಯಕ್ಷರು ವೈ.ಶ್ರೀನಿವಾಸ್ ರಾವ್, ಜಿಲ್ಲಾ ಸಹಕಾರ್ಯದರ್ಶಿ ಚಂದ್ರಶೇಖರ್, ಹೊಂಡರಬಾಳು ರಾಜು, ಚಿಲಕವಾಡಿ ನಾಗೇಂದ್ರ, ಖಿಜರ್, ನೌಷದ್ ಇದ್ದರು.
ವರದಿ ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.