ಕೊಳ್ಳೇಗಾಲ. ಕಾಯಕಯೋಗಿ, ಕೆಪಿ‌ಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಂಸದರು ದಿವಂಗತ ಆರ್.ದೃವನಾರಾಯಣ್ ರವರ 65 ನೇ ವರ್ಷದ ಹುಟ್ಟುಹಬ್ಬವನ್ನು ಇಲ್ಲಿನ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಧೃವನಾರಾಯಣ್ ರವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿ, ಬಳಿಕ ಸಾರ್ವಜನಿಕರಿಗೆ ಉಪಹಾರ ವ್ಯವಸ್ಥೆ ಮಾಡಿದರು.
ಬಳಿಕ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಇದಕ್ಕೂ ಮುನ್ನ ಎಸ್.ಡಿ.ಎ ವಾಕ್ ಮತ್ತು ಶ್ರವಣ ನ್ಯೂನತೆಯ ವಸತಿ ಶಾಲಾ ಮಕ್ಕಳಿಗೆ ಬಿರಿಯಾನಿ ಊಟ ವ್ಯವಸ್ಥೆ ಮಾಡಿದರು.
ಬಳಿಕ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ನಮ್ಮ ನೆಚ್ಚಿನ ನಾಯಕರಾದ ಸಂಸದರಾಗಿದ್ದಂತಹ ಧೃವನಾರಾಯಣ್ ರವರ 65 ನೇ ವರ್ಷದ ಹುಟ್ಟುಹಬ್ಬವನ್ನು ಜಿಲ್ಲೆಯ ವಿವಿಧೆಡೆ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಅದೇ ರೀತಿ ಕೊಳ್ಳೇಗಾಲದ ಅಭಿಮಾನಿಗಳು ಅನ್ನದಾನ, ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಧೃವನಾರಾಯಣ್ ರವರನ್ನು ಸ್ಮರಣೆ ಮಾಡುವ ಮೂಲಕ ಮಾದರಿ ರಾಜಕಾರಣಿ ಎಂದು ತಿಳಿಸಿದರು.
ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧೃವನಾರಾಯಣ್ ರವರ ಹುಟ್ಟುಹಬ್ಬವನ್ನು ಎಲ್ಲಾ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜೊತೆ ಆಚರಣೆ ಮಾಡಲಾಗುತ್ತಿದೆ. ಧೃವನಾರಾಯಣ್ ರವರು ಅಪರೂಪದ ರಾಜಕಾರಣಿಯಾಗಿದ್ದವರು. ಅಭಿವೃದ್ಧಿ ಕೆಲಸ ಮಾಡುವಲ್ಲಿ ದೇಶದಲ್ಲಿ ಮೊದಲ ಸಂಸದರಾಗಿದ್ದವರು,  ಧೃವನಾರಾಯಣ್ ರವರು ಬದುಕಿದ್ದರೇ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುವ ಅವಕಾಶ ಇರುತ್ತಿತ್ತು. ಅವರು ಅಗಲಿದರೂ ಸಹಾ ಎಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ. ಅವರಿಗೆ ಶುಭಕೋರುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸೀಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತೋಟೇಶ್, ಉಪ್ಪಾರ ನಿಗಮ ಮಾಜಿ ಅಧ್ಯಕ್ಷರು ಶಿವಕುಮಾರ್, ಹನೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಮುಕುಂದ ವರ್ಮ, ಜಿ.ಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ ನಾಯಕ,  ನಗರಸಭೆ ಮಾಜಿ ಅಧ್ಯಕ್ಷರು ಬಸ್ತೀಪುರ ಶಾಂತರಾಜು, ರಮೇಶ್, ಮಲ್ಲಿಕಾರ್ಜುನ, ಮಾಜಿ ಉಪಾಧ್ಯಕ್ಷರು ಅಕ್ಮಲ್ ಪಾಷ, ಸುರೇಶ್, ಮಾಜಿ ಸದಸ್ಯರು ಮುಡಿಗುಂಡ ಶಾಂತರಾಜು,ಮಂಜುನಾಥ್, ಶಿವಮಲ್ಲು, ರಾಮಕೃಷ್ಣ, ಗೋವಿಂದರಾಜು, ನರಸಿಂಹ ಸೇರಿದಂತೆ ಅನೇಕರು ಇದ್ದರು.
ವರದಿ ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.