ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ಹನೂರು: ತಾಲೂಕಿನ ಬುದ್ದಿಮಾಂದ್ಯ ಮಹಿಳೆ ಮೇಲೆ ಹಲವಾರು
ಬಾರಿ ಅತ್ಯಾಚಾರ ನಡೆಸಿ ಮಗುವಿಗೆ ಜನ್ಮ ನೀಡಲು ಕಾರಣನಾಗಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ | 10 ಸಾವಿರ ದಂಡ ಕಟ್ಟುವಂತೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ. ಕೃಷ್ಣ ತೀರ್ಪು ನೀಡಿದ್ದಾರೆ.

ಕುರಟ್ಟಿ ಹೊಸೂರು ಗ್ರಾಮದ ಡಿ.ವಿಲೇಜ್ ನಿವಾಸಿ ಸಿದ್ದಯ್ಯ (60) ಶಿಕ್ಷೆಗೆ ಒಳಗಾದ ಆರೋಪಿ ಈತ 2019 ರಲ್ಲಿ ಅರಣ್ಯ ಪ್ರದೇಶಗ ಬಳಿ ಕುರಿಮೇಯಿಸುತ್ತಿದ್ದ ಬುದ್ದಿಮಾಂದ್ಯ ಮಹಿಳೆ ಮೇಲೆ  ಬಲವಂತವಾಗಿ ಅತ್ಯಾಚಾರ ನಡೆಸಿ ಮಹಿಳೆಯು ಗರ್ಭವತಿಯಾಗಲು ಕಾರಣನಾಗಿದ್ದು ಅತ್ಯಾಚಾರ ವಿಷಯ ಮನೆಯರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.
 ನಂತರ ಮಗುವಿಗೆ ಮಹಿಳೆ
ಜನ್ಮ ನೀಡಿದ್ದು ಈ ಸಂಬಂಧ ರಾಮಾಪುರ ಪೊಲೀಸ್‌ ಠಾಣೆಯಲ್ಲಿ ಸಿದ್ದಯ್ಯನ ವಿರುದ್ಧ ಪ್ರಕರಣ ದಾಖಲಾಗಿ ಬಂಧಿಸಿದ್ದರು.ಠಾಣೆಯ ತನಿಖಾಧಿಕಾರಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾ ಲಯಕ್ಕೆ ಸಲ್ಲಿಸಿದ್ದು ಕೆ.ಯೋಗೇಶ್ ಸರ್ಕಾ ರದ ಪರವಾಗಿ ಆರೋಪಿತನ ವಿರುದ್ದ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು ಬಳಿಕ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾ ಯಾಲಯದ ನ್ಯಾಯಾಧೀಶರಾದ ಎಸ್.ಜೆ ಕೃಷ್ಣ ಅವರು ಆರೋಪಿಗೆ 10 ವರ್ಷ ಜೈಲು ಶಿಕ್ಷೆ 10 ಸಾವಿರ ದಂಡ ಕಟ್ಟುವಂತೆ ಮತ್ತು ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಸಜೆ ಹಾಗೂ ದಂಡದಲ್ಲಿ 8 ಸಾವಿರ ರೂ.ಗಳನ್ನು ನೊಂದ ಮಹಿಳೆಗೆ ಪರಿಹಾರ ವಾಗಿ ನೀಡ ಬೇಕೆಂದು ನೊಂದ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಪರಿಹಾರವಾಗಿ ನೀಡಬೇಕೆಂದು ಮತ್ತು ನೊಂದ ಮಹಿಳೆಗೆ ಪರಿಹಾರ ನಿಗದಿ ಪಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರಿಗೆ ನಿರ್ದೇಶನ ನೀಡಿ ತೀರ್ಪು ನೀಡಿದ್ದಾರೆ.
ವರದಿ ನೂರುಲ್ಲಾ ಕೌದಳ್ಳಿ

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.