ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಅಧ್ಯಕ್ಷರಾಗಿ ಎಸ್. ನಟರಾಜು ಆಯ್ಕೆ
ಕೊಳ್ಳೇಗಾಲ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷರಾಗಿ ಹಲೋ ಮೈಸೂರ್ ಪತ್ರಿಕೆಯ ವರದಿಗಾರ ಹಾಗೂ ಭೀಮನಗರದ ನಿವಾಸಿ ಎಸ್.ನಟರಾಜು ಅವರು ಅವಿರೋಧವಾಗಿ ಆಯ್ಕೆಯಾದರು.
ಕೊಳ್ಳೇಗಾಲ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಆಗಸ್ಟ್ 9ರ ಭಾನುವಾರ ನಡೆದ ಸದಸ್ಯರ ಸಭೆಯಲ್ಲಿ ಎಸ್.ನಟರಾಜು ಅವರನ್ನು ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ಕುಮಾರ ಕೆಮ್ಮುಗಿಲು ದಿನಪತ್ರಿಕೆಯ ವರದಿಗಾರ, ಕಾರ್ಯದರ್ಶಿಯಾಗಿ ಸೂರಾಪುರ ರಾಜೇಶ್ (ವಾರದ ಮಿಂಚು ಪತ್ರಿಕೆಯ ಸಂಪಾದಕ) ಹಾಗೂ ಖಜಾಂಚಿಯಾಗಿ ಮಣಿಕಂಠನ್ (ಇಂದು ಸಂಜೆ ಪತ್ರಿಕೆ ವರದಿಗಾರ) ಅವರನ್ನು ಆಯ್ಕೆ ಮಾಡಲಾಯಿತು.
ನೂತನ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ನಟರಾಜ್ ಮಾತನಾಡುತ್ತಾ
ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ಹಾಗೂ ನಮ್ಮ ಸಂಘದ ಜಿಲ್ಲಾಧ್ಯಕ್ಷರಾದ ನಿಂಪುರಾಜೇಶ್ ಅವರಿಗೂ ಅಭಿನಂದನೆಗಳನ್ನು ತಿಳಿಸುತ್ತಾ ನನಗೆ ವಹಿಸಿರುವ ಜವಾಬ್ದಾರಿಯುತ ಸ್ಥಾನವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಮತ್ತು ಸಂಘದ ಹೆಸರಿಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ನಿಂಪು ಸುರೇಶ್, ಚಿನ್ನಸ್ವಾಮಿ, ಸಾಗರ್ ರಾಜ್, ಸರ್ದಾರ್ ಹಾಜರಿದ್ದರು.
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.