ಕೊಳ್ಳೇಗಾಲದಲ್ಲಿ “ಯಶಸ್ವಿಯಾಗಿ ನಡೆದ 53 ನೇ ತಿಂಗಳ ಕಣ್ಣಿನ ತಪಾಸಣಾ ಶಿಬಿರ ” ಹೆಚ್.ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಗಳು ಕೊಳ್ಳೇಗಾಲ , ರೋಟರಿ ಮಿಡ್- ಟೌನ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ರವರ ಸಹಯೋಗದೊಂದಿಗೆ ಸತತ 53 ನೇ ತಿಂಗಳಾ ಉಚಿತ "ನೇತ್ರ ನಿರಂತರ " ಹೆಸರಿನ ಕಣ್ಣಿನ ತಪಾಸಣಾ ಶಿಬಿರವು ದಿನಾಂಕ:-09-08- 2026 ನೇ ಭಾನುವಾರದಂದು ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣ ಕೊಳ್ಳೇಗಾಲದಲ್ಲಿ ಯಶಸ್ವಿಯಾಗಿ ನಡೆಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಮಿಡ್ ಟೌನ್ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಎಂಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್ ರವರು ಈ ಕಾರ್ಯಕ್ರಮವು ಸತತ 53 ತಿಂಗಳುಗಳಿಂದ ನಡೆಸುತ್ತಾ ಬಂದಿದ್ದು ಈಗಾಗಲೇ 5921 ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಅದರಲ್ಲಿ 3510 ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಈ ಕಾರ್ಯಕ್ರಮವನ್ನು ಎಚ್ ಕೆ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀಮತಿ ಪ್ರೇಮಲತಾ ಕೃಷ್ಣಸ್ವಾಮಿ ರವರು ಹಾಗೂ ಅವರ ಸುಪುತ್ರರಾದಂತಹ ಹೆಚ್.ಕೆ ಮಹಾನಂದ್ ರವರು ಹಾಗೂ ರೋಟರಿ ಮಿಟ್ ಟೌನ್ ಸಂಸ್ಥೆ ಮತ್ತು ರೋಟರಿ ಸಂಸ್ಥೆ, ಹಾಗೇ ಕೊಳ್ಳೇಗಾಲದ ಮಹಾಜನತೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದ್ದು " ನೇತ್ರ ನಿರಂತರ " ಕಣ್ಣಿನ ತಪಾಸಣಾ ಶಿಬಿರವು ನಿರಂತರವಾಗಿ ನಡೆಯಲಿ ಎಂದು ಆಶಿಸುತ್ತಾ ಪ್ರತಿ ತಿಂಗಳು ಎರಡನೇ ಭಾನುವಾರ ನಡೆಯುವ ಉಚಿತ ನೇತ್ರ ನಿರಂತರ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಇತರರಿಗೂ ಕಾರ್ಯಕ್ರಮದ ಅನುಕೂಲಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಶ್ರೀ, ಶಿವಾನಂದ ರೋ. ಗಿರೀಶ್ ಜಡೆ, ಹಾಗೂ ಅರವಿಂದ ಕಣ್ಣಿನ ಆಸ್ಪತ್ರೆಯ ಡಾ. ಮಿತ ಜೈಕುಮರ್ ಡಾ. ನರೇಂದ್ರ ರಾಜಕ್ , ಹಾಗೂ ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕರಾದ ವಿಜಯ್ ಕುಮಾರ್ ರವರು ವಿಶ್ವಚೇತನ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕರಾದ ರವಿತೇಜ ರವರು ಆಸ್ಪತ್ರೆಯ ಸಿಬ್ಬಂದಿಗಳು, ಸಂಸ್ಥೆಯ ಸಿಬ್ಬಂದಿಗಳಾದ ,ಕು. ರಮ್ಯ , ಮಯೂರ, ಯಶವಂತ್, ಹಾಗೂ ಸಿಬ್ಬಂದಿ ವರ್ಗದವರು
ಹಾಜರಿದ್ದರು.
ಈ ದಿನದ ಶಿಬಿರದಲ್ಲಿ 187 ರೋಗಿಗಳನ್ನು ತಪಾಷಣೆಗೆ ಒಳಪಟ್ಟಿದ್ದು ಅದರಲ್ಲಿ 60 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆ ಕೊಯಮತೂರಿಗೆ ಕಳುಹಿಸಿಕೊಡಲಾಯಿತು.
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.