ಮಲೈ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಕಾಲ್ನಡಿಗೆ
ಹನೂರು: ನಾಗರ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ನೂರಾರು ಭಕ್ತರು ಬಿಸಿಲಿನ ಝಳ ತಾಪಕ್ಕೆ ಲೆಕ್ಕಿಸದೆ "ಮಾಯ್ಕಾರ ಮಾದಪ್ಪ ನಮ್ಮಪ್ಪ ನೀನೆ" ಎಂದು ಮಾದಪ್ಪನ ಹಾಡು ಹಾಡುತ್ತಾ ಸೋಮವಾರ ಕಾಲ್ನಡಿಗೆಯಲ್ಲಿ ತೆರಳಿದರು.
ಆಗಸ್ಟ್ 12 ರಂದು ನಾಗರ ಅಮಾವಾಸ್ಯೆ ಹಿನ್ನೆಲೆ ಮೈಸೂರು ಹಾಗೂ ಚಾಮರಾಜನಗರ ಕಡೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ
ಈ ಅಮಾವಾಸ್ಯೆಗೆ ಪ್ರತಿ ವರ್ಷ ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇದರಲ್ಲಿ ಚಾಮರಾಜನಗರ ಸೇರಿದಂತೆ ಮಂಡ್ಯ, ಶ್ರೀರಂಗಪಟ್ಟಣ. ಮೈಸೂರು, ಮಳವಳ್ಳಿ, ಮದ್ದೂರು, ಕಾಲ್ನಡಿಗೆಯಲ್ಲಿ ತೆರಳಿ ದೇವರ ದರ್ಶನ, ಉತ್ಸವಾದಿ ಸೇವೆ, ಹರಕೆ ಸೇವೆಯಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ.
ಹಾಗಾಗಿ ಈ ಬಾರಿ ಆ.12ರಂದು ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಸೋಮವಾರ ಭಕ್ತರು ಗುಂಪು ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಕೌದಳ್ಳಿ ಮೂಲಕ ಕ್ಷೇತ್ರದತ್ತ ತೆರಳುತ್ತಿದ್ದು, ಅಮಾವಾಸ್ಯೆ ಪೂಜೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಾದಪ್ಪನ ಹಾಡು ಹೇಳುತ್ತಾ ಭಕ್ತಿ ಭಾವದಿಂದ ತೆರಳುತ್ತಿದ್ದರೆ, ಯುವಕರ ಗುಂಪು ಉಘ ಮಾದಪ್ಪ ಉಘ ಜಯಘೋಷ ಮೊಳಗಿಸುತ್ತಾ ಸಾಗಿದರು.
ಈ ವೇಳೆ ಮೈಸೂರಿನ ರಾಯನಹುಂಡಿ ಗ್ರಾಮದ ಭಕ್ತರೊಬ್ಬರು ಮಾತನಾಡಿ, ಭೀಮನ ಅಮಾವಾಸ್ಯೆಗೆ ಕಳೆದ 25 ವರ್ಷದಿಂದಲೂ ಮ.ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದೇವೆ. ಈ ಬಾರಿ ಗ್ರಾಮದಿಂದ 65 ಜನರು ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದು, 2 ದಿನ ಅಲ್ಲೇ ವಾಸ್ತವ್ಯ ಹೂಡುವುದಾಗಿ ತಿಳಿಸಿದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರ ದೇವರ ದರ್ಶನ, ವಿವಿಧ ಸೇವಾ ಉತ್ಸವ ಹಾಗೂ ಹರಕೆ ಸೇವೆಗಳಲ್ಲಿ ಭಾಗಿಯಾಲಿದ್ದರೆ.
ವರದಿ ನೂರುಲ್ಲಾ ಕೌದಳ್ಳಿ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.