*ಒಡೆಯರ ಪಾಳ್ಯದಲ್ಲಿ ಕುಡಿವ ನೀರಿನ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಭರವಸೆ | ದಾಹ ನೀಗಿಸುವುದಾಗಿ ವಾಗ್ದಾನ ಯುವ ಮುಖಂಡ ಹನೂರು ನಿಶಾಂತ್*
ಅಧಿಕಾರ ಇರಲಿ, ಅಧಿಕಾರ ಇಲ್ಲದಿರಲಿ ಕ್ಷೇತ್ರದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ ಎಂದು ಸಮಾಜ ಸೇವಕ ಹಾಗೂ ಯುವ ಮುಖಂಡ ನಿಶಾಂತ್ ತಿಳಿಸಿದರು.
ಹನೂರು: ತಾಲೂಕಿನ ಒಡೆಯರ ಪಾಳ್ಯ ಸಮೀಪದ ಮಂದೆ ಬೈಲೂ ಗ್ರಾಮದಲ್ಲಿ ತೆರೆದ ಬಾವಿಯಿಂದ ಮನೆ ಮನೆಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸಮರ್ಪಕ ಮಳೆಯಾಗಿಲ್ಲ. ಇದರಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕೊಳವೆ ಬಾವಿಗಳಲ್ಲೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲವಾಗಿರುವುದರಿಂದ, ಹಲವು ಗ್ರಾಮಗಳಿಗೆ ಟ್ಯಾಂಕರ್ಮೂಲಕ ಕುಡಿಯುವ ನೀರು ವಿತರಣೆ
ಒಡೆಯರಪಾಳ್ಯ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದ ಮುಖಂಡ ನಿಶಾಂತ್, ಮಾಡುತ್ತಿದ್ದೇನೆ ಎಂದರು.
ಮಾರ್ಟಳ್ಳಿ ಭಾಗದಲ್ಲಿ ಉತ್ತಮ ಮಳೆಯಾದರೂ ಚೆಕ್ ಡ್ಯಾಂಗಳಲ್ಲಿ ಹೂಳು ತೆಗೆಯದೆ ಇರುವುದರಿಂದ, ಬಂದ ಮಳೆಯ ನೀರು ಸಂಪೂರ್ಣವಾಗಿ ತಮಿಳುನಾಡಿಗೆ ಹರಿದು ಹೋಗಿದೆ. ಇದರಿಂದ ಈ ಭಾಗದ ಜನರು ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ, ಮೇವಿಲ್ಲದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಒಂದು ಚೆಕ್ ಡ್ಯಾಂ ಅನ್ನು 7 ಲಕ್ಷ ರು.. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚೆಕ್ ಡ್ಯಾಂಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಇತಿಹಾಸದಲ್ಲಿಯೇ ಒಡೆಯರಪಾಳ್ಯ ಮತ್ತು ಪಿ.ಜಿ.ಪಾಳ್ಯ ಗ್ರಾಮಗಳ ವ್ಯಾಪ್ತಿಯಲ್ಲಿ ಇಂತಹ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಈ ಭಾಗದ ಜನಪ್ರತಿನಿಧಿಗಳಿಗೂ ಅಧಿಕಾರಿಗಳಿಗೂ ಗ್ರಾಮಸ್ಥರು ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಆದರೆ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಗ್ರಾಮಸ್ಥರು ನನಗೆ ತಿಳಿಸಿದ ಕೂಡಲೇ, ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಉಪಯೋಗಕ್ಕೆ ಬಾರದೆ ಇದ್ದ ತೆರೆದ ಬಾವಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ. ಇರುವ ನೀರನ್ನು ಮೋಟಾರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಗ್ರಾಮದ ಮಾಲತಿ ದೇವಿ ಮಾತನಾಡಿ ನಮ್ಮ ಗ್ರಾಮದಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆಯನ್ನು ಶಾಸಕರು ಹಾಗೂ ಸಂಸದರಿಗೆ ವಾಟ್ಸಪ್ ಮುಖಾಂತರ ಮಾಹಿತಿ ನೀಡಿದೆ ಆದರೆ ಇದುವರೆಗೂ ಯಾವುದೇ ಸ್ಪಂದನೆ ನೀಡಿಲ್ಲ ಆದರೆ ಯುವ ಮುಖಂಡ ನಿಶಾಂತ್ರವರು ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಗಮನಕ್ಕೆ ತಂದ ಒಂದೇ ವಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ್ದಾರೆ. ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಹಲವಾರು
ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಗಮನಕ್ಕೆ ತಂದರು ಶಾಸಕರು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ನಿಶಾಂತ್ ರವರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಕೊಳವೆಬಾವಿ ಕೊರೆಸುವ ಅವಶ್ಯಕತೆ ಇರಲಿಲ್ಲ. ಟಿಬೆಟ್ ಕ್ಯಾಂಪ್, ಹೊಸಪಾಳ್ಯ ಎಲ್ಲಾ ಕಡೆ ಬರುವ ಅವರಿಗೆ ಒಡೆಯರ ಪಾಳ್ಯಕ್ಕೆ ಬರಲು ಸಮಯವಕಾಶ ಇಲ್ಲದಿದ್ದ ಮೇಲೆ ಅವರ ಅವಶ್ಯಕತೆಯೂ ನಮಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಕಾರ್ಯಕ್ರಮಕ್ಕೂ ಮುನ್ನಾ ತೆರೆದಬಾವಿ ಮೋಟಾರ್ ಬಟನ್ ಹೊತ್ತಿ ಕುಡಿಯುವ ನೀರಿನ ಪೈಪ್ಲೈನ್ಗೆ ಚಾಲನೆ ನೀಡಿದರು.ಬೈಲೂರು ಗ್ರಾಪಂ ಮಾಜಿ ಅಧ್ಯಕ್ಷ ಸದಾನಂದ, ಪಿಎಸಿಸಿ ಬ್ಯಾಂಕ್ ನಿರ್ದೇಶಕ ತಿಮ್ಮರಾಜಿಪುರ ಪುಟ್ಟಣ್ಣ ಜಿ.ಕೆ ಹೊಸೂರು ಬಸವ ರಾಜು .ಕಾಮಗೆರೆ ಸುರೇಶ್. ಪಾಳ್ಯ ಸಿದ್ದಪ್ಪಾಜಿ ನಾಯಕ, ರಂಗೇಗೌಡ, ಜಡೇರುದ್ರಸ್ವಾಮಿ, ಬಸವ ರಾಜುಗುರುಸ್ವಾಮಿ, ಬಸವಣ್ಣ, ವಿಷಕಂಠಮೂರ್ತಿ, ಮಲ್ಲಣ್ಣ, ಶಿವಣ್ಣ, ನಂದೀಶ್, ಜೈಕುಮಾರ್, ಸಾಗರ್, ಕುಮಾರ್, ಸಂತೋಷ, ನೀಲಮ್ಮ, ಮಂಗ ಳಮ್ಮ, ಮಲ್ಲಜಮ್ಮ, ಸುಂದ್ರಮ್ಮ, ವಿಶಾಲ ಮ್ಮ, ರಾಚಮ್ಮ, ಚಿನ್ನಮ್ಮ, ರಾಣಿ, ಮೀನಾಕ್ಷಿ, ದೊಡ್ಡಮ್ಮ, ಭಾಗ್ಯಮ್ಮ, ಸುಮಮ್ಮ, ಹಾಜರಿದ್ದರು.
ವರದಿ ನೂರುಲ್ಲಾ ಕೌದಳ್ಳಿ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.