ಕೊಳ್ಳೇಗಾಲ. ತಮಿಳುನಾಡಿಗೆ ಕಾವೇರಿ ನೀರು ಬೀಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಖಂಡಿಸಿ ಶುಕ್ರವಾರ ಇಲ್ಲಿನ. ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಮುಡಿಗುಂಡ ಸೇತುವೆ ಸಮೀಪದ ರಸ್ತೆಯಲ್ಲಿ ಜಮಾಯಿಸಿದ್ದ ರೈತ ಮುಖಂಡರು ಧಿಕ್ಕಾರ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಿದರು.
ಜಿಲ್ಲಾಧ್ಯಕ್ಷರು ಗೌಡೇಗೌಡ ಮಾತನಾಡಿ, ತಮಿಳುನಾಡು ರಾಜ್ಯದ ಬೆಳೆಗಳಿಗೆ 3.500 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು 15 ದಿನಗಳ ಕಾಲ ಬೀಡುವಂತೆ ಆದೇಶ ಮಾಡಿರುವುದನ್ನು ಇಂದು ನಮ್ಮ ರಾಜ್ಯ ರೈತ ಸಂಘದ ವತಿಯಿಂದ ಖಂಡಿಸುತ್ತೇವೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಮತ್ತು ಕಾವೇರಿಯ ಕಣಿವೆಗಳಲ್ಲಿ ಮಳೆಯಾಗದೇ ಎಲ್ಲಾ ಜಲಾಶಯಗಳಲ್ಲಿ ನೀರಿಲ್ಲದ ಪರಿಸ್ಥಿತಿಯಲ್ಲಿ ಆದೇಶ ಮಾಡಿರುವುದು ನಿಜಕ್ಕೂ ಖಂಡನೀಯ ಎಂದರು.
1997 ರಲ್ಲಿ ಬಂಗಾರಪ್ಪ ರವರು ಮುಖ್ಯಮಂತ್ರಿಗಾಗಿದ್ದ ಸಂಧರ್ಭದಲ್ಲಿ ಗಟ್ಟಿಧ್ವನಿಯಿಂದ ತಮಿಳುನಾಡಿಗೆ ನೀರು ಬೀಡಲ್ಲ ಅಂತ ಉತ್ತರ ನೀಡಿದ್ದಂತೆ, ಈಗಿನ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್ ರವರು ಯಾವುದೇ ಆದೇಶಗಳಿಗೆ ಮನ್ನಣೆ ನೀಡದೇ ನಮ್ಮಗೆ ಕುಡಿಯಲು ನೀರು ಇಲ್ಲದ ಸಂಧರ್ಭದಲ್ಲಿ ತಮಿಳುನಾಡು ಬೆಳೆಗೆ ನೀರು ಬೀಡಲು ಸಾಧ್ಯವಿಲ್ಲ ಎಂದು ಹೇಳಿ ನೀರು ಬೀಡಬಾರದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮನ್ನು ಸಹಾ ಕಿತ್ತೋಗಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಬರದಿಂದಾಗಿ ರೈತರು ನೀರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದರೂ, ಅಧಿಕಾರಕ್ಕಾಗಿ ದೆಹಲಿಯಲ್ಲಿ ಸೇರಿರುವ ಶಾಸಕರು ನಿಮ್ಮಗೆ ನಾಚಿಕೆ, ಮಾನ ಇದ್ದರೇ ಕೂಡಲೇ ರಾಜ್ಯಕ್ಕೆ ವಾಪಸ್ಸು ಆಗಿ ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಹೋಗಿ ಏನೇನೂ ಬರ ಬಂದಿದೆ, ಎಲ್ಲೆಲ್ಲಿ ಫಸಲು ನಷ್ಟವಾಗಿದೆ ಅಂತಹವರಿಗೆ ಏಕ್ಟೆರ್ ಗೆ 50 ಸಾವಿರ ಘೋಷಣೆ ಮಾಡಬೇಕು. ಇಲ್ಲವಾದರೇ ರೈತರ ಪರಿಸ್ಥಿತಿ ಶೋಚನೆಯಾಗಲಿದೆ. ನಮ್ಮ ಜಿಲ್ಲೆಯಲ್ಲಿ ಕುಡಿಯಲು ನೀರಿಲ್ಲ, ಕೆರೆಕಟ್ಟೆಗಳಲ್ಲಿ ಒಣಗಿ ಹೋಗಿರುವುದ್ದರಿಂದ ಅಂತರಜಾಲ ಹೆಚ್ಚಲು ಹಾಗೂ ದನ, ಕರು, ಜಾನುವಾರುಗಳಿಗೆ ಅನುಕೂಲವಾಗಲು ಕಬಿನಿ ಜಲಾಶಯದಿಂದ ಕೂಡಲೇ ನೀರು ಬೀಡಿಸಬೇಕು. ಇಲ್ಲವಾದಲ್ಲಿ ಕಬಿನಿ ಜಲಾಶಯಕ್ಕೆ ನಮ್ಮ ಸಂಘಟನೆಯ ವತಿಯಿಂದ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಗೌರವಧ್ಯಕ್ಷ ಶಿವಮಲ್ಲು, ತಾಲ್ಲೂಕು ಅಧ್ಯಕ್ಷ ನಟೇಶ್, ಜಿಲ್ಲಾ ಉಪಾಧ್ಯಕ್ಷ ರವಿನಾಯ್ಡು, ಹನೂರು ತಾಲ್ಲೂಕು ಅಧ್ಯಕ್ಷ ರಾಜಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜಾದ್ ಖಾನ್, ಹಸಿರು ಸೇನೆ ಅಧ್ಯಕ್ಷ ಕುಮಾರ್ ಚಿಕ್ಕಲ್ಲೂರು, ಕೂಡ್ಲೂರು ವೆಂಕಟೇಶ್, ರಾಜಣ್ಣ, ಮಸಣಶೆಟ್ಟಿ, ಕುಮಾರ್, ದೊಡ್ಡಯ್ಯ, ಪರಮೇಶ್, ಶಿವರಾಜು, ಮಾದೇಶ್, ಮೋಳೆ ವೆಂಕಟೇಶ್, ಸಿದ್ದಶೆಟ್ಟಿ, ತಾಂಡವಮೂರ್ತಿ ಹಾಗೂ ಇತರರು ಇದ್ದರು.
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.