_ಅರಣ್ಯ ಇಲಾಖೆ ನಿರ್ಲಕ್ಷ್ಯ ದಿಂದ ಮತ್ತೋಂದು ಚಿರತೆ ದಾಳಿಗೆ ಕರು ಬಲಿ_
ಹನೂರು: ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿಗೆ ಒಳಪಡುವ ತೋಮರ್ ಪಾಳ್ಯ ಗ್ರಾಮದ ಮಾಸಣ್ಣ ತೋಟದಲ್ಲಿ ಅಶೋಕ್ ಎಂಬವರು ಕಟ್ಟಿ ಹಾಕಿದ ಕರು ಮೇಲೆ ನೆನ್ನೆ ರಾತ್ರಿ ಸುಮಾರು 9:೦೦ ಸಮಯದಲ್ಲಿ ಚಿರತೆ ದಾಳಿ ಮಾಡಿದ್ದು ಕರು ಬಲಿಯಾಗಿದ್ದು
ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದಕ್ಕೆ ಒಂದು ವಾರದ ಮುಂಚಿತವಾಗಿಯೂ ಎರಡು ಸಾಕು ನಾಯಿಗಳನ್ನು ಸಹ ಚಿರತೆ ಎಳೆದು ಕೊಂಡು ಹೋಗಿದ್ದು.
ಮತ್ತು ಇದೇ ಸ್ಥಳದಲ್ಲಿಯೇ ಮೊನ್ನೆ ಇನ್ನೊಂದು ಕರು ಸಹ ಚಿರತೆ ದಾಳಿ ಮಾಡಿ ಕರು ಬಲಿ ಪಡೆದುಕೊಂಡಿದ್ದರು ಸಹ ಇಷ್ಟೊಂದು ಚಿರತೆ ದಾಳಿಗಳು ನಡೆದರು ಮೇಲ್ನೋಟಕ್ಕೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಎನ್ನಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿ.
ವರದಿ- ನೂರುಲ್ಲಾ ಕೌದಳ್ಳಿ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.