ಕೊಳ್ಳೇಗಾಲ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಅನಿರ್ದಿಷ್ಟವದಿ ಧರಣಿ ನಾಲ್ಕನೇ ದಿನಕ್ಕೆ ಮುಕ್ತಾಯಗೊಂಡಿತ್ತು.
ಪಟ್ಟಣದ ಉಪವಿಭಾಗ ಕಚೇರಿಯ ಮುಂದೆ ರೈತರ ಹಿತರಕ್ಷಣಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಟಗರಪುರದಿಂದ ಗೋಪಿನಾಥಂವರೆಗೂ ಗ್ರಾಮಠಾಣಾ ಗುರುತು ಮಾಡಿ ಇ ಸ್ವತ್ತು ನೀಡುವುದು, ಕಾಲುವೆಗಳಿಗೆ ಗಲೀಜು ನೀರು ಹಾಗೂ ಯುಜಿಡಿ ನೀರು ಹರಿಸುವುದನ್ನು ತಡೆಯುವುದು ಸೇರಿದಂತೆ ಹಲವು ಸಮಸ್ಯೆಗಳ ಬಗೆಹರಿಸುವಂತೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಡಲಾಯಿತು.
ಸ್ಥಳಕ್ಕೆ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಹಾಗೂ ತಹಶಿಲ್ದಾರ್ ಬಸವರಾಜು ರವರು ಆಗಮಿಸಿ, ಕಾಲುವೆಗಳ ಕಾಮಗಾರಿಗಳ ಅಭಿವೃದ್ಧಿ ಪಡಿಸುವುದು ಹಾಗೂ ಟಗರಪುರದಿಂದ ಗೋಪಿನಾಥ್ ರವರಿಗೆ ಗ್ರಾಮಾಠಾಣಾ ಗುರುತು ಮಾಡಿ ಇ ಸ್ವತ್ತು ಮಾಡಿಸಿಕೊಡುವ ವಿಚಾರವಾಗಿ ಇತರೆ ಸಮಸ್ಯೆಗಳ ಕುರಿತು ಇನ್ನೂ ಹದಿನೈದು ದಿನಗಳೊಳಗೆ ಜಿಲ್ಲಾಧಿಕಾರಿಗಳ ಸಭೆ ಕರೆದು ಹಂತಹಂತವಾಗಿ ಬಗೆಹರಿಸಲು ಚರ್ಚಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ನೀಡಿದ್ದ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಹಿತರಕ್ಷಣಾ ಸಂಘದ ಅಧ್ಯಕ್ಷ ದಶರಥ, ಕಾರ್ಯದರ್ಶಿ ರಾಮಕೃಷ್ಣ ರೈತ ಸಂಘದ ಅಧ್ಯಕ್ಷ ಸರಗೂರು ನಾಗರಾಜು ಮೋಳೆ ರಾಜು, ಸರಗೂರು ವೀರಭದ್ರ ಸ್ವಾಮಿ, ಅಣಗಳ್ಳಿ ಬಸವರಾಜು, ಹಿತ್ತಲದೊಡ್ಡಿ ನಾಗರಾಜು, ರೈತ ಮುಖಂಡರು ಚಲುವನಹಳ್ಳಿ ಮಲ್ಲಿಕಾರ್ಜುನಸ್ವಾಮಿ, ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷರು ಮೇಘರಾಜು ಎಂ. ಪಾಲಾಕ್ಷ, ಭೀಮನಗರ ಬಸವರಾಜು, ತೇರಂಬಳ್ಳಿ ಶಿವಮೂರ್ತಿ ಹಾಗೂ ಇತರರು ಇದ್ದರು.
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.