ದಶಕಗಳ ಬೇಡಿಕೆ ಸ್ವಾಮಿ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ  ಚಾಲನೆ ನೀಡಲಾಗಿದೆ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ಸದುದೇಶದಿಂದ ಕ್ರಮವಹಿಸಲಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು . .


ಹನೂರು ಪಟ್ಟಣದ 11ನೇ ವಾರ್ಡಿನ ಬಳಿ ಬರುವ ಸ್ವಾಮಿಹಳ್ಳ ಕುರುಬರ ಸ್ಮಶಾನಕ್ಕೆ ತೆರಳುವ ಪ್ರಮುಖ ರಸ್ತೆ ಹಾಗೂ ರೈತರ ಜಮೀನುಗಳಿಗೆ ತೆರಳುವ ರಸ್ತೆ ಮಾರ್ಗ ಮಧ್ಯದಲ್ಲಿ ಸಿಗುವ  ಸ್ವಾಮಿ ಹಳ್ಳಕ್ಕೆ ಪ್ರಕೃತಿ ವಿಕೋಪ ದಡಿ 25 ಲಕ್ಷ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ 10 ಲಕ್ಷ ಸೇರಿದಂತೆ 35 ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. 

ದಶಕಗಳ ಬೇಡಿಕೆ ಸೇತುವೆ ನಿರ್ಮಾಣಕ್ಕೆ ಅಸ್ತು.  : ಸ್ವಾಮಿ ಹಳ್ಳ ಮಳೆಗಾಲದಲ್ಲಿ ಅಪಾರ ಪ್ರಮಾಣವಾದ ನೀರು ಅರಿದು ಹೋಗುವುದರಿಂದ ಈ ಭಾಗದಲ್ಲಿ ಇರುವ ರೈತರು ಮತ್ತು ಸ್ಮಶಾನಕ್ಕೆ ತೆರಳಲು ಪ್ರಮುಖ ರಸ್ತೆ ಆಗಿರುವುದರಿಂದ ಈ ಭಾಗದಲ್ಲಿ ಇರುವ ಸ್ವಾಮಿ ಹಳ್ಳಕ್ಕೆ ದಶಕಗಳಿಂದ ಸೇತುವೆ ನಿರ್ಮಾಣದ ಕೂಗು ಕೇಳಿ ಬಂದಿತ್ತು ಹೀಗಾಗಿ ಈ ಭಾಗದ ನಾಗರಿಕರ ರೈತರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸುಸರ್ಜಿತವಾದ ಸೇತುವೆ ನಿರ್ಮಾಣವನ್ನು ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು . .

ಮುಂದಿನ ದಿನಗಳಲ್ಲಿ ರಸ್ತೆಗೆ ಅಭಿವೃದ್ಧಿಗೆ ಕ್ರಮ :  ಸೇತುವೆ ಕಾಮಗಾರಿ ನಡೆಯಲಿರುವುದರಿಂದ ಈ ಭಾಗದಲ್ಲಿ ಇರುವ ರೈತರ ಜಮೀನುಗಳಿಗೆ ತೆರಳುವ ರಸ್ತೆ ಸಹ 30 ಅಡಿ ರೈತರು ಬಿಟ್ಟರೆ ಉತ್ತಮವಾದ ರಸ್ತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಈ ಭಾಗದಲ್ಲಿ ನೂರಾರು ಎಕರೆ ಜಮೀನು ಇರುವುದರಿಂದ ರೈತರು ಮಳೆಗಾಲದಲ್ಲಿ ಓಡಾಡಲು ತುಂಬಾ ಕಷ್ಟಕರ ಆಗಿರುವುದರಿಂದ ಉತ್ತಮವಾದ ಸೂಸರ್ಜಿತವಾದ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ನೆರೆದಿದ್ದ ರೈತರಿಗೆ ಭರವಸೆ ನೀಡಿದರು ...

ಇದೇ ಸಂದರ್ಭದಲ್ಲಿ ಮುಖಂಡರಾದ, ರಾಜೂಗೌಡ, ಮಂಜೇಶ್ ಗೌಡ,ಶಿವರಾಮ, ರಾಜು ನಾಯ್ಡು, ರಾಮು ನಾಯ್ಡು, ಮಲ್ಲಣ್ಣ, ಸಿದ್ದರಾಜು,ಅನಂತು, ಮಹೇಶ್ ನಾಯಕ,ರಾಜೇಂದರ್, ವೆಂಕಟೇಶ್ ಡಾಬಾ,  ನಿಂಗ್ ಶೆಟ್ಟಿ, ಡಿ ಕೆ ರಾಜು, ದೇಸಿಗೌಡ,ಎಸ್, ಆರ್ ಮಹದೇವ್,ನಟರಾಜು ಗೌಡ, ಅಮೀನ್, ವೆಂಕಟೇಶ್,ಕೆ. ಆರ್ ಡಿ ಐ ಎಲ್ ಇಂಜಿನಿಯರ್ ಕಾರ್ತಿಕ್,ಗುತ್ತಿಗೆದಾರರಾದ ರಾಜೇಂದ್ರ ಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು ...

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.