ಹನೂರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ ನಡೆಸಿದರು. ಆಗಸ್ಟ್ 15ರ ಒಳಗಡೆ ಜಿಲ್ಲಾಧಿಕಾರಿಗಳು ಸಭೆ ಕರೆದು ಸಮಸ್ಯೆ ಬಗೆಹರಿಸದಿದ್ದರೆ ಗಡಿ ಗ್ರಾಮಗಳಲ್ಲಿ ಆಗಸ್ಟ್ 15ರಂದು ಕಪ್ಪು ಬಾವುಟ ಮನೆಗಳ ಮೇಲೆ ಆರಿಸಲಾಗುತ್ತದೆ ಎಂದು ಮೂಲ ಸಿದ್ದಾಂತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಗೌಡೇ ಗೌಡ ತಿಳಿಸಿದ್ದಾರೆ.

ಹನೂರು ಪಟ್ಟಣದ ಮಲೆ ಮಹದೇಶ್ವರ ಬೆಟ್ಟದ ಮುಖ್ಯರಸ್ತೆ ಪೆಟ್ರೋಲ್ ಬಂಕ್ ನಿಂದ ಪ್ರತಿಭಟನೆ ಮೆರವಣಿಗೆಯಲ್ಲಿ ತೆರಳಿ ನಂತರ ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನೇತೃತ್ವ ವಹಿಸಿ ನಂತರ ಅವರು ಮಾತನಾಡಿದರು .

ಹನೂರು ತಾಲೂಕಿನಲ್ಲಿ ಮಳೆ ಇಲ್ಲದೆ ಕಂಗಾಲಾಗಿರುವ ರೈತಪಿ ವರ್ಗ ಹಾಗೂ ಜನಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಬರಗಾಲದಿಂದ ತತ್ತರಿಸಿರುವ ಕ್ಷೇತ್ರವನ್ನು ಸರ್ಕಾರ ಕೂಡಲೇ ಬರ ತಾಲ್ಲೂಕು ಎಂದು ಘೋಷಣೆ ಮಾಡಬೇಕು ಮೂರು ಹೋಬಳಿಗಳಲ್ಲೂ ಗೋಶಾಲೆ ತೆರೆಯಬೇಕು ಜಾನುವಾರುಗಳಿಗೆ ನೀರು ಮತ್ತು ಮೇವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು . .

ನೀರಾವರಿ ಯೋಜನೆಗೆ ಕಾಮಗಾರಿ ಪ್ರಾರಂಭಿಸಿ : ತಾಲೂಕಿನ ಉಡುತೊರೆ ಹಳ್ಳ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಮುಖಾಂತರ ನೀರು ತುಂಬಿಸಲು ಮತ್ತು ಕೆರೆಕಟ್ಟೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ಸಿದ್ದರಾಮಯ್ಯನವರ ಅವಧಿಯಲ್ಲಿ ಬಜೆಟ್ ನಲ್ಲಿ 490 ಕೋಟಿ ಅನುದಾನ ಮೀಸಲಿಟ್ಟಿದೆ ಅದನ್ನು ತುರ್ತಾಗಿ ಕಾಮಗಾರಿ ಪ್ರಾರಂಭಿಸಲು ಈಗಿನ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಅನುಮೋದನೆ ನೀಡಿ ಹಣ ಬಿಡುಗಡೆಗೊಳಿಸಿ ಕಾಮಗಾರಿಪ್ರಾರಂಭಿಸಬೇಕು ಎಂದರು . .

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿ 

ಬರಗಾಲದಿಂದ ತತ್ತರಿಸಿರುವ ಜನತೆಗೆ ಕುಡಿಯುವ ನೀರಿಲ್ಲದೆ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಬೋರ್ವೆಲ್ ಗಳಲ್ಲಿ ದುರಸ್ತಿಗೊಳಿಸಿ ಹೊಸದಾಗಿ ಬೋರ್ವೆಲ್ ಗಳನ್ನು ಪುರಸಬೇಕು ಗ್ರಾಮಾಂತರದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು ಎಂದು ಪ್ರತಿಭಟನೆ ವೇಳೆಯಲ್ಲಿ ಒತ್ತಾಯಿಸಿದರು .

ಆಗಸ್ಟ್ 15 ರ ಒಳಗಡೆ ಜಿಲ್ಲಾಧಿಕಾರಿ ಭೇಟಿ ನೀಡಿ ಇಲ್ಲದಿದ್ದರೆ ಗಡಿ ಗ್ರಾಮಗಳಲ್ಲಿ ಕಪ್ಪು ಬಾವುಟ ಪ್ರದರ್ಶನ...

ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಆಲಂಬಾಡಿ ಹಾಗೂ ಸುತ್ತಮುತ್ತಲಿನ ಆರು ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ವ್ಯವಸ್ಥೆ ಒದಗಿಸಬೇಕು ಗ್ರಾಮಗಳಲ್ಲಿ ಅನಾದಿಕಾಲದಿಂದಲೂ ವಾಸ ಮಾಡುತ್ತಿರುವ ಜನತೆಗೆ ಮನೆಗಳಿಗೆ ಈ ಸ್ವತ್ತು ಹಾಗೂ ಜಮೀನಿಗೆ ಸಾಗುವಳಿ ಚೀಟಿ ನೀಡಬೇಕು ಫಾರಂ ನಂಬರ್ 57 ರಲ್ಲಿ ದರ್ಖಾಸ್ ಅರ್ಜಿ ಸಲ್ಲಿಸಿದ್ದು ಶೀಘ್ರದಲ್ಲೇ ರೈತರಿಗೆ ಸಾಗುವಳಿ ಚೀಟಿ ನೀಡಬೇಕು  ನಿಲ್ಲದಿದ್ದರೆ ಆಗಸ್ಟ್ 15ರಂದು ಗ್ರಾಮ ಪಂಚಾಯತಿಯ ಜಿಲ್ಲೆಯ ಗಡಿ ಗ್ರಾಮದ ಆರು ಗ್ರಾಮಗಳಲ್ಲಿ ಮನೆಯ ಮೇಲೆ ಆಗಸ್ಟ್ 15ರಂದು ಕಪ್ಪು ಬಾವುಟ ಪ್ರದರ್ಶನ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದಲ್ಲಿ ಕುಡಿಯಲು ನೀರಿಲ್ಲ ತಮಿಳುನಾಡಿಗೆ ನೀರು ಬಿಡುವುದು ಬೇಡ.

ರಾಜ್ಯ ಸರ್ಕಾರ ಕಾವೇರಿ ಕುಡಿಯುವ ನೀರಿನ ನಿರ್ವಹಣ ಮಂಡಳಿಯ ಆದೇಶಕ್ಕೆ ಮಣಿದು ಮೂರುವರೆ ಸಾವಿರ ಕ್ಯೂಸಕ್ ನೀರು ತಮಿಳುನಾಡಿಗೆ ಬಿಡುಗಡೆಗೊಳಿಸುವುದು ಬೇಡ ಆದೇಶಕ್ಕೆ ಮಣಿಯದೆ 1992 ರಲ್ಲಿ ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರು ನೀರು ಬಿಡದೆ ಆದೇಶವನ್ನು ಧಿಕ್ಕರಿಸಿದ್ದರು ಅದೇ ರೀತಿ ಹಿಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಆದೇಶವನ್ನು ಧಿಕ್ಕರಿಸಿ ಇಲ್ಲಿನ ಕುಡಿಯುವ ನೀರಿನ ವ್ಯವಸ್ಥೆಗೆ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕು ರೈತ ಸಂಘಟನೆ ನಿಮ್ಮ ಜೊತೆಯಲ್ಲಿ ಇರುತ್ತದೆ ಎಂದು ಇದೇ ವೇಳೆಯಲ್ಲಿ ಒತ್ತಾಯಿಸಿದರು.

ತಾಲೂಕು ದಂಡಾಧಿಕಾರಿಗಳ ಭರವಸೆ  ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ತಂಡಾಧಿಕಾರಿಗಳಾದ ಚೈತ್ರ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ನಿಮ್ಮ ಮನವಿಯನ್ನು ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಗಡಿ ಗ್ರಾಮದಲ್ಲಿ ಸಭೆ ನಡೆಸಲು ಸಹ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತಂದು ಆಗಸ್ಟ್ 15 ರ ಒಳಗಡೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಿಲ್ಲಾ ಸಂಘಟನಾ ಕಾರ್ಯಧ್ಯಕ್ಷ ಅಮ್ಜಾದ್ ಖಾನ್  ಜಿಲ್ಲಾ ಮಹಿಳಾ ಅಧ್ಯಕ್ಷರು ರಾಜಮಣಿ  ಹನೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಮುತ್ತುಲಕ್ಷ್ಮಿ ತಾಲೂಕು ಅಧ್ಯಕ್ಷ ರಾಜೇಂದ್ರನ್
ಪ್ರಧಾನ ಕಾರ್ಯದರ್ಶಿ ಕೂಡ್ಲೂರು ವೆಂಕಟೇಶ್  ಹನೂರು ತಾಲೂಕು ಉಪಾಧ್ಯಕ್ಷರಾದ ರತ್ನವೇಲು ಮೈಸೂರು ಜಿಲ್ಲಾಧ್ಯಕ್ಷರಾದ ವಿಜಯೇಂದ್ರ ಪ್ರಧಾನ ಕಾರ್ಯದರ್ಶಿ ಸರಗೂರು ನಟರಾಜ್ ನಂಜನಗೂಡು  ತಾಲೂಕು ಅಧ್ಯಕ್ಷರಾದ ಸಿರು ಮೋಳೆ ಸಿದ್ದಪ್ಪ ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾದ ದಿಲೀಪ್ ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾದ ನಟೇಶ್ ಗೌರವಾಧ್ಯಕ್ಷರಾದ ಮಷೀನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪರಮೇಶ್ ಇನ್ನಿತರರು ಉಪಸ್ಥಿತರಿದ್ದರು.
ವರದಿ- ನೂರುಲ್ಲಾ ಕೌದಳ್ಳಿ

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.