ಕೊಳ್ಳೇಗಾಲ. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಅವರ ಪತ್ನಿ ದಿವಂಗತ ಚೆನ್ನಮ್ಮ ದೇವೇಗೌಡ ಅವರ ಪುಣ್ಯಸ್ಮರಣೆ ಅಂಗವಾಗಿ ಇಲ್ಲಿನ ಜೆಡಿಎಸ್ ಕಾರ್ಯಕರ್ತರು ಗುರುವಾರ ಭಾವಪೂರ್ಣ ನಮನ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆ ಸಲ್ಲಿಸಿ, ಅವರ ಸರಳತೆ, ಕುಟುಂಬ ಮೌಲ್ಯಗಳು ಮತ್ತು ಸಮಾಜಮುಖಿ ಬದುಕನ್ನು ಸ್ಮರಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆ ಜೆಡಿಎಸ್ ಮುಖಂಡರು ಮಾತನಾಡಿ, ದಿವಂಗತ ಚೆನ್ನಮ್ಮ ದೇವೇಗೌಡ ಅವರು ಸರಳತೆ, ಸೌಜನ್ಯ ಮತ್ತು ಕುಟುಂಬ ಮೌಲ್ಯಗಳಿಗೆ ಹೆಸರಾಗಿದ್ದ ಮಹನೀಯರು. ಅವರ ಆದರ್ಶಮಯ ಜೀವನ ಎಲ್ಲರಿಗೂ ಮಾದರಿಯಾಗಿದ್ದು, ಅವರ ಅಗಲಿಕೆ ರಾಜ್ಯಕ್ಕೆ ಹಾಗೂ ಜೆಡಿಎಸ್ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಭಾವಪೂರ್ಣ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶಿವಮಲ್ಲೇಗೌಡ, ನಿವೃತ್ತ ಉಪಾಧ್ಯಾಯ ಪಿ. ಸೋಮಣ್ಣ, ನಿವೃತ್ತ ರೈಲ್ವೆ ಅಧಿಕಾರಿ ಜೆ. ಲಿಂಗರಾಜು, ನಿವೃತ್ತ ಪ್ರಾಂಶುಪಾಲ ರಾಜಪ್ಪ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಸಿದ್ದಲಿಂಗೇಗೌಡ, ಜೆಡಿಎಸ್ ಮುಖಂಡರಾದ ಎನ್. ಸುರೇಶ್, ಬಿ. ರಾಚಯ್ಯ, ನಾಗರಾಜು (ನಾಣಿ), ಶ್ರೀನಿವಾಸ್, ನಾಗೇಂದ್ರ, ಮಹದೇವ ಶೆಟ್ಟಿ, ಮಾಂಹಳ್ಳಿ ಉಬೇದ್, ಪ್ರತಾಪ್, ಸ್ವಾಮಿ ಮೋಳೆ, ತೆಳನೂರು ರಾಜೇಶ್, ಕೆ.ಬಿ.ಆರ್. ಗೌಡ, ಉತ್ತಂಬಳ್ಳಿ ಕೃಷ್ಣ, ಆರ್. ಕೆಂಪೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ- ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.