ಮಾಯ್ಕಾರ ಮಾದಪ್ಪನಿಗೆ ₹3 ಕೋಟಿ ಕಾಣಿಕ ನೀಡಿದ್ದ ಭಕ್ತ ಸಮೂಹ
ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ - ಹುಂಡಿ ಹಣ ಎಣಿಕೆಯಲ್ಲಿ 41 ದಿನಗಳಲ್ಲಿ 3.37 ಕೋಟಿ ರೂ. ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣ ದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಿ. ಪುರುಷೋತ್ತಮ್ ಹಾಗೂ ಸಾಲೂರು ಬೃಹನ್ಮಠದ ಪೀಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ = ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಬೆಳಗ್ಗೆ 7ರಿಂದ ಆರಂಭವಾದ ಎಣಿಕೆ ಕಾರ್ಯ = ರಾತ್ರಿ 7ಕ್ಕೆ ಮುಕ್ತಾಯಗೊಂಡಿತು.
ಈ ಬಾರಿ ಹುಂಡಿ ಎಣಿಕೆಯಲ್ಲಿ ಒಟ್ಟು 3,37,06,956 ನಗದು, 58 ಗ್ರಾಂ ಚಿನ್ನ - ಹಾಗೂ 1. 350 ಕೆ.ಜಿ.ಬೆಳ್ಳಿ ವಸ್ತುಗಳು ಕಾಣಿಕೆಯಾಗಿ ಲಭ್ಯವಾಗಿವೆ. ಅಲ್ಲದೆ ಈ ಚಲಾವಣೆಯಲ್ಲಿ ಇಲ್ಲದ 2000 ರೂ. ಮುಖಬೆಲೆಯ ನಾಲ್ಕು ನೋಟುಗಳು
ಹಾಗೂ ವಿದೇಶಿ ಕರೆನ್ಸಿಯ 10 ನೋಟು ಗಳು ಸಹ ಸಂಗ್ರಹಗೊಂಡಿವೆ.
ಎಣಿಕೆ ಕಾರ್ಯದಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಮಹಾದೇವಪ್ಪ ಕೀಳನಪುರ, ಭಾಗ್ಯಮ್ಮ ಕುಪ್ಯಾ, ಮರಿಸ್ವಾಮಿ ಕಾಗಲವಾಡಿ, ಗಂಗನ ತಿಮ್ಮಯ್ಯ ಮೆಲ್ಲಹಳ್ಳಿ ಹಾಗೂ ಕುಮಾರ ವಿಜಯ ರಾವಂದೂರು ಸೇರಿದಂತೆ ಹಣಕಾಸು ಲೆಕ್ಕಪತ್ರ ಸಲಹೆಗಾರರಾದ ಮಹದೇವ ಸಿ., ಉಪ ಕಾರ್ಯದರ್ಶಿ ಜಿ.ಎಲ್.ಚಂದ್ರಶೇಖರ್, ಚಾ.ನಗರ ಡಿಸಿ ಕಚೇರಿ ವಿಷಯ ನಿರ್ವಾಹಕರಾದ ಆರ್.ಭಾರತಿ, ಪ್ರಾಧಿಕಾರದ ಸಿಬ್ಬಂದಿ ಇಂದ್ರೇಶ್, ಸರಗೂರು ಮಹದೇವಸ್ವಾಮಿ, ಜಿ.ಪಾರುಪತ್ತೆದಾರರಾದ ಮಹದೇವಸ್ವಾಮಿ ನಾಗರಾಜು, ಜನಾರ್ದನ್, ವೆಂಕಟಾಚಾರಿ ಬ್ಯಾಂಕ್ ಆಫ್ ಬರೋಡ ಕೊಳ್ಳೇಗಾಲ ಶಾಖೆ ವ್ಯವಸ್ಥಾಪಕರು ಮತ್ತು ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ಪ್ರಾಧಿ ಕಾರದ ವಿವಿಧ ವಿಭಾಗಗಳ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
ವರದಿ - ನೂರುಲ್ಲಾ ಕೌದಳ್ಳಿ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.