ಹನೂರು: 1 ಕೋಟಿ 96 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಭೂಮಿ ಪೂಜೆ

ಹನೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿದರು.

ಕಾಮಗೆರೆ ಮುಖ್ಯರಸ್ತೆಯಿಂದ ಗುಂಡಾಲ್ ಡ್ಯಾಂ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿ, ಮಧುವನಹಳ್ಳಿ ಉಪ್ಪಾರ ಸಮುದಾಯ ಭವನದ ಮುಂದುವರೆದ ಕಾಮಗಾರಿ ಹಾಗೂ ಸಿಸಿ ರಸ್ತೆ ಸೇರಿದಂತೆ ಒಟ್ಟು 1 ಕೋಟಿ 96 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ  ಶಾಸಕ ಎಂ.ಆರ್.ಮಂಜುನಾಥ್  ಮಾತನಾಡಿ "ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ನಮ್ಮ ತಾಲೂಕಿಗೆ ಸಾಕಷ್ಟು ಅನುದಾನ ತರಲಾಗಿದೆ. ಕಾಮಗೆರೆ-ಗುಂಡಾಲ್ ಡ್ಯಾಂ ಸಂಪರ್ಕ ರಸ್ತೆ ಅಭಿವೃದ್ಧಿಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಧುವನಹಳ್ಳಿ ಉಪ್ಪಾರ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡರೆ ಸಮುದಾಯದವರಿಗೆ ಉಪಯುಕ್ತವಾಗಲಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಅನುದಾನ ತರಲಾಗುವುದು" ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಆರ್.ಡಿ.ಎಲ್. ಎಇ ಚಿಕ್ಕಲಿಂಗಯ್ಯ, ಇಂಜಿನಿಯರ್ ಕಾರ್ತಿಕ್, , ಸಿಂಗನಲ್ಲೂರು ರಾಜಣ್ಣ, ಮಂಜೇಶ್ ಗೌಡ, ನಟರಾಜು ಗೌಡ, ಜೇಸಿಂ ಪಾಷ,  ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಮೇಶ್, ಶಿವು, ರಾಕೇಶ್, ಕಿಶೋರ್, ಗುರುಮೂರ್ತಿ, ಗುರುಸ್ವಾಮಿ, ಮಾದಮ್ಮ, ಬಸವಣ್ಣ, ಶಿವಮಲ್ಲು, ತಮ್ಮಯ್ಯ ಶೆಟ್ಟಿ, ನಂಜುಂಡ, ನಟೇಶ್, ಚಿನ್ನಸ್ವಾಮಿ, ಅರಸಶೆಟ್ಟಿ, ಮೋಹನ್ ಕುಮಾರ್, ಗೋವಿಂದ, ಪ್ರಭುಸ್ವಾಮಿ, ಶ್ರೀನಿವಾಸ್, ಪುಟ್ಟರಾಜು ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ - ನೂರುಲ್ಲಾ ಕೌದಳ್ಳಿ

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.