ಹನೂರು ಕ್ಷೇತ್ರದ ಭಗೀರಥ ಶಾಸಕ ಮಂಜುನಾಥ್ - ಉಪ್ಪಾರ ಹಾಗೂ ಕಾಂಗ್ರೆಸ್ ಮುಖಂಡ ಶಿವಕುಮಾರ್ ಬಣ್ಣನೆ
 ಕೊಳ್ಳೇಗಾಲ- ಉಪ್ಪಾರ ಸಮುದಾಯದ ಕುಲದೇವರಾದ ಭಗೀರಥ ಅವರ ಹೆಸರಿನಲ್ಲಿಯೇ ಹನೂರು ಶಾಸಕ ಮಂಜುನಾಥ್ ಅವರನ್ನು ಭಗೀರಥ ಎಂದೇ ಕರೆಯುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಿವಕುಮಾರ್ ಅವರು ಶಾಸಕ ಮಂಜುನಾಥ್ ಅವರನ್ನು ಬಣ್ಣನೆ ಮಾಡಿದ್ದಾರೆ.

ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮಧುವನಹಳ್ಳಿ ಗ್ರಾಮದ ಉಪ್ಪಾರ ಬೀದಿಯಲ್ಲಿ ಇಂದು ಉಪ್ಪಾರ ಭವನದ ಮುಂದುವರಿದ ಕಾಮಗಾರಿಗಳಿಗೆ ಶಾಸಕ ಮಂಜುನಾಥ್ ಭೂಮಿ ಪೂಜೆ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡ ಶಿವಕುಮಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಭೆಯಲ್ಲಿ ಮಾತನಾಡಿದರು.

ಹನೂರು ಭಾಗದಲ್ಲಿ ಅನೇಕ ಕೆರೆಗಳಿಗೆ ನೀರು ತಂದಿದ್ದಾರೆ. ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ಇವರ ಶ್ರಮದಿಂದ ಈ ಕೆಲಸಗಳು ಆಗಿದೆ. ಆದ್ದರಿಂದ ಇವರನ್ನು ಭಗೀರಥ ಎಂದೇ ಕ್ಷೇತ್ರದಲ್ಲಿ ಕರೆಯುತ್ತಿದ್ದಾರೆ ಎಂದು ಬಣ್ಣಿಸಿದರು.

ಮುಂದಿನ ದಿನಗಳಲ್ಲಿ ಮಧುವನಹಳ್ಳಿ ಗ್ರಾಮದ ಜಮೀನುಗಳಿಗೂ ಗುಂಡಾಲ್ ಡ್ಯಾಂ ನಿಂದ ನೀರು ಹರಿಸಬೇಕು ಎಂದು ಮನವಿ ಮಾಡಿದರು.

ಹಾಗೆಯೇ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಬೇಕು, ಸಮುದಾಯದ ಜನರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿ ಮಲೆಯ ಮಹದೇಶ್ವರ ತಮಗೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್, ಮುಖಂಡರಾದ ಮಂಜೇಶ್, ಹಿರಿಯರಾದ ಮಷಣಶೆಟ್ಟಿ, ಅರಸ ಶೆಟ್ಟಿ ಮುಂತಾದವರು ಇದ್ದರು.
ವರದಿ- ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.