ಹನೂರು: ಸಮೀಪದ ಹುಲ್ಲೇಪುರ ಜಮೀನೊಂದರಲ್ಲಿ ಭಾನುವಾರ ಅಸ್ತತ್ವಗೊಂಡಿದ್ದ ಗಂಡು ಚಿರತೆ ಮೃತಪಟ್ಟಿದೆ.  ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಹುಲ್ಲೇಪುರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು,
 
ಈ ವೇಳೆ ಅಕ್ಕಪಕ್ಕದ ರೈತರು ಸದ್ದು ಮಾಡಿದರೂ ಸ್ಥಳ ಬಿಟ್ಟು ಹೋಗಿದೆ ಇದ್ದಾಗ. ಇದರಿಂದ ಆತಂಕಕ್ಕೊಳಗಾದ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

 ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿ ಪರಿಶೀಲಿಸಿದಾಗ ಚಿರತೆ ಮೇಲೆ ಏಳಲು ಸಾಧ್ಯವಾಗದೆ ನಿತ್ರಾಣಗೊಂಡಿತ್ತು.
 ಬಳಿಕ ಚಿರತೆಯನ್ನು ಬಲೆಯಲ್ಲಿ ಸೆರೆ ಹಿಡಿದು ಚಿಕಿತ್ಸೆಗಾಗಿ ವಾಹನದಲ್ಲಿ ಅಜ್ಜಿಪುರದ ಸಸ್ಯ ಕ್ಷೇತ್ರಕ್ಕೆ ಕರೆತರಲಾಯಿತು. ಕೆಳಗಿಳಿಸುವಾಗ ಯಾವುದೇ ಚಲನವಲನ ಇಲ್ಲದಿರುವುದನ್ನು ಗಮನಿಸಿದಾಗ ಚಿರತೆ ಮೃತಪಟ್ಟಿರುವುದು ದೃಢಪಟ್ಟಿದೆ. ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕ‌ರ್, ಎಸಿಎಫ್ ಮರಿಸ್ವಾಮಿ, ಆರ್‌ಎಫ್‌ಒ ಮಹೇಶ್‌, ಎನ್‌ಟಿಸಿಎ ಪ್ರತಿನಿಧಿ ಟಿ.ಜಾನ್‌‌ಪೀಟ‌ರ್ ಹಾಗೂ ಪಪಂ ಮಾಜಿ ಸದಸ್ಯ ಸಂಪತ್ ಕುಮಾರ್ ಸಮ್ಮುಖದಲ್ಲಿ ಎನ್‌ಟಿಸಿಎ ಹಾಗೂ ಎಸ್‌ಪಿ ಪ್ರಕಾರ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪಶು ವೈದ್ಯಾಧಿಕಾರಿ ವಾಸೀಂ ಮಿರ್ಜಾ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಚಿರತೆ ಮೃತ ದೇಹವನ್ನು ಸ್ಥಳದಲ್ಲಿಯೇ ಸುಡಲಾಯಿತು. ಚಿರತೆ ಸಾವಿಗೆ ನಿಖರ ಕಾರಣವನ್ನು ತಿಳಿಯಲು ಅಂಗಾಂಗದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಳಿಕ ಚಿರತೆ ನಿತ್ರಾಣಗೊಂಡಿದ್ದ ಸ್ಥಳದ ಸುತ್ತಮುತ್ತ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಶ್ವಾನದಳದಿಂದ ಕೂಬಿಂಗ್ ನಡೆಸಲಾಯಿತು.

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.