ಕೊಳ್ಳೇಗಾಲ. ಮಾಜಿ ಶಾಸಕ ಹಾಗೂ ಉಗ್ರಾಣ ನಿಗಮ ಅಧ್ಯಕ್ಷರಾಗಿದ್ದ ಎಸ್.ಜಯಣ್ಣ ರವರ ಮೊದಲನೇ ಪುಣ್ಯಸ್ಮರಣೆಯನ್ನು ಅಭಿಮಾನಿಗಳು ಅಚ್ಚುಕಟ್ಟಾಗಿ ನಡೆಸಿದರು.
ಮಾಂಬಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.
ಮಾಜಿ ಶಾಸಕ ಜಯಣ್ಣ ರವರು ಸರಳ ಸಜ್ಜನಿಕೆವುಳ್ಳ ವ್ಯಕ್ತಿಯಾಗಿದ್ದರು. ಇವರ ಅವಧಿಯಲ್ಲಿ ಸಾಕಷ್ಟು ಕೊಳ್ಳೇಗಾಲ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಜಯಣ್ಣರವರು ನಮ್ಮನ್ನು ಬಿಟ್ಟು ಅಗಲಿದ್ದರೂ ಅವರ ಅಭಿವೃದ್ಧಿ ಕೆಲಸದ ಮೂಲಕ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಚಾಮುಲ್ ಅಧ್ಯಕ್ಷರು ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಉಪ್ಪಾರ ನಿಗಮ ಮಾಜಿ ಅಧ್ಯಕ್ಷರು ಶಿವಕುಮಾರ್, ಪಿಎಸಿಸಿ ನಿರ್ದೇಶಕರು ಮುಳ್ಳೂರು ಮಂಜುನಾಥ್, ಮುಖಂಡರು ಪರಶಿವಮೂರ್ತಿ, ನಗರಸಭೆ ಮಾಜಿ ಸದಸ್ಯರು ಮುಡಿಗುಂಡ ಶಾಂತರಾಜು, ಬಸ್ತೀಪುರ ಶಾಂತರಾಜು, ಕೊಪ್ಪಾಳಿ ಮಹದೇವನಾಯಕ, ಮಾಂಬಳ್ಳಿ ನಂಜುಂಡಸ್ವಾಮಿ, ತಾ.ಪಂ ಮಾಜಿ ಉಪಾಧ್ಯಕ್ಷರು ಬಸವಣ್ಣ ಹಾಗೂ ಇತರರು ಇದ್ದರು.
- ನಿಂಪುವಾರ್ತೆ
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.