ಕೊಳ್ಳೇಗಾಲ: ದೇವಾಂಗ ಮಹಾ ಸಭಾದ ಯಜಮಾನರುಗಳ ಒಪ್ಪಿಗೆ ಇಲ್ಲದೇ ಕೇವಲ ಒಂದು ಗುಂಪಿನವರು ಐತಿಹಾಸಿಕ ಚೌಡೇಶ್ವರಿ ಅಮ್ಮನವರ ಕತ್ತಿಹಬ್ಬ ಆಚರಣೆ ಮಾಡುವುದಾಗಿ ಹೇಳಿ ಕೊಂಡಿದ್ದು, ಇವರ ನಿರ್ಧಾರವನ್ನು ಕೊಳ್ಳೇಗಾಲ ದೇವಾಂಗ ಮುಖ್ಯ ಯಜಮಾನರು ಸೇರಿದಂತೆ ಕುಲದ ಎಲ್ಲರೂ ವಿರೋಧಿಸಿದ್ದು 2026 ಫೆಬ್ರವರಿ ತಿಂಗಳಲ್ಲಿ ನಡೆಯಲು ಉದ್ದೇಶಿದ್ದ ಕತ್ರಿ ಹಬ್ಬವನ್ನು ಮುಂದೂಡಲಾಗಿದೆ ಎಂದು ದೇವಾಂಗ ಸಮುದಾಯದ ಯಜಮಾನರಾದ ಎ.ಎನ್.ನಾಗರಾಜಯ್ಯ ಅವರು ತಿಳಿಸಿದ್ದಾರೆ.
ಕೊಳ್ಳೇಗಾಲ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ದೇವಾಂಗ ಕುಲದ ಯಜಮಾನರು ತಿಳಿಸಿದರು.
ಐತಿಹಾಸಿಕ ಶ್ರೀ ಚೌಡೇಶ್ವರಿ ಅಮ್ಮನವರ ಕತ್ತಿಹಬ್ಬ ಆಚರಣೆ ಮಾಡಬೇಕಾದರೆ, ಹಿಂದಿನಿಂದಲೂ ಕೆಲವೊಂದು ಆಚರಣೆ ಮತ್ತು ಕಟ್ಟುಪಾಡುಗಳು ಇದೆ. ಆದರೆ ಅದೆಲ್ಲವನ್ನೂ ಉಲ್ಲಂಘನೆ ಮಾಡಿ ಕೆಲವೇ ಕೆಲವು ಮುಖಂಡರು ಕತ್ತಿಹಬ್ಬ ಆಚರಣೆ ಮಾಡಲು ಮುಂದಾದ ಕಾರಣ, ಕುಲದ ಎಲ್ಲರೂ ಸಭೆ ನಡೆಸಿ ಒಮ್ಮತವಾದ ನಿರ್ಧಾರ ತೆಗೆದುಕೊಂಡು ಹಬ್ಬವನ್ನು ಮುಂದೂಡಲಾಗಿದೆ ಎಂದರು.
ಶ್ರೀ ಚೌಡೇಶ್ವರಿ ಅಮ್ಮನವರಿಗೆ ರಾಜ್ಯ ದೇಶ ವಿದೇಶಗಳಲ್ಲಿ ಸಹ ಭಕ್ತರು ಇದ್ದಾರೆ. ಯಾರೂ ಸಹ ದೇಣಿಗೆ ನೀಡಬಾರದು. ಮುಂದಿನ ದಿನಗಳಲ್ಲಿ ಎಲ್ಲರ ಒಪ್ಪಿಗೆ ಪಡೆದು ಕತ್ತಿಹಬ್ಬ ಆಚರಣೆ ದಿನಾಂಕ ನಿಗಧಿ ಪಡಿಸಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ದೇವಾಂಗ ಮುಖಂಡರಾದ ಶ್ರೀನಿವಾಸ್, ನಿರಂಜನ್ ರವಿ, ಎ.ಪಿ.ಶಂಕರ್, ಸುಂದರೇಶ್, ಸುಂದ್ರಪ್ಪ ಕನಕರಾಜು,ಸಿ.ವಿ ಬಾಬು, ಇನ್ನೂ ಮುಂತಾದವರು ಇದ್ದರು.
ವರದಿ: ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.