ಕೊಳ್ಳೇಗಾಲ. ತಾಲ್ಲೂಕಿನ ಪಾಳ್ಯ ಗ್ರಾಮದ ಮನೆಯಲ್ಲಿ ಮಲಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಜರುಗಿದೆ.
ಪಾಳ್ಯ ಗ್ರಾಮದ ಕೊಂಗೇಗೌಡರವರ ಪುತ್ರಿ ರಂಜಿತಾ(18) ಎಂಬಾಕೆ ಕಾಣೆಯಾದ ಯುವತಿ.
ಈಕೆ ಕೊಳ್ಳೇಗಾಲದ ಜೆ.ಎಸ್.ಎಸ್ ಕಾಲೇಜುನಲ್ಲಿ ಎರಡನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಈಕೆ ಡಿ.15 ರಂದು ರಾತ್ರಿ 9 ಗಂಟೆಯಲ್ಲಿ ಊಟ ಮಾಡಿ ಮಲಗಿದ್ದವಳು ಮರುದಿನ ಡಿ.16 ಬೆಳಿಗ್ಗೆ 6 ಗಂಟೆಯಲ್ಲಿ ಎದ್ದು ನೋಡಿದಾಗ ಕಾಣದಿರುವುದನ್ನು ಗಮನಿಸಿ ಎಲ್ಲಾ ಹುಡುಕಡಿದ್ದರೂ ಸಹಾ ಎಲ್ಲೂ ಸೀಗದ ಕಾರಣ ಕಾಣೆಯಾದವಳ ತಾಯಿ ಶೋಭ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾದ ಯುವತಿ ಪತ್ತೆಗೆ ಕ್ರಮಜರುಗಿಸಿದ್ದಾರೆ.
ಚಹರೆ: ರಂಜಿತಾ (16 ವರ್ಷ 6 ತಿಂಗಳು), ಸುಮಾರು5.2 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ತೆಳ್ಳನ ಶರೀರ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈಕೆಯ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದು ಬಂದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪೋ.ನಂ 08224-252041 ಕರೆಮಾಡತಕ್ಕದ್ದು…

  • ನಿಂಪುವಾರ್ತೆ

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.