ಕೊಳ್ಳೇಗಾಲ. ಸಂವಿಧಾನ ಸಮರ್ಪಣಾದಿನದಂದು ಸಂವಿಧಾನ ರಕ್ಷಕ ಅಭಿಯಾನದಲ್ಲಿ ಸಾಂವಿಧಾನಿಕ ಸವಾಲುಗಳು, ದೃಷ್ಠಿಕೋನಗಳು ಮತ್ತು ಮಾರ್ಗಗಳು ಎಂಬ ವಿಚಾರ ಸಂಕಿರಣ ಸಮಾರಂಭವನ್ನು ಹಮ್ಮಿಕೊಂಡಿದ್ದರು.

ಪಟ್ಟಣದ ಎಂ.ಜಿ.ಎಸ್.ವಿ ಮೈದಾನದಲ್ಲಿ ಬುಧವಾರ ಸಂಜೆ ಜೇತವನ ಬುದ್ಧವಿಹಾರ ಭಂತೆ ಮನೋರಕ್ಖಿತ ಬಂತೇಜಿ ರವರ ದಿವ್ಯಸಾನಿಧ್ಯವನ್ನು ವಹಿಸಿದರು. ಉದ್ಘಾಟನೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ನೆರವೇರಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹದೇವ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತೋಟೇಶ್, ಕಾಂಗ್ರೇಸ್ ಮುಖಂಡ ರಫೀಕ್ ಅಹಮದ್, ಕಾಂಗ್ರೇಸ್ ಜಿಲ್ಲಾ ಓಬಿಸಿ ಉಸ್ತುವಾರಿ ವಿನೋದರಾಜ್, ಕಾಂಗ್ರೇಸ್ ವಿಭಾಗ ರಾಜ್ಯ ಕಾರ್ಯದರ್ಶಿ ಜೆ.ಎಸ್. ನಿಶ್ಚಿತ್, ಆಯೋಜಕರು ರಾಜಶೇಖರಮೂರ್ತಿ, ಮಾಂಬಳ್ಳಿ ಮುಜ್ಜಮಿಲ್ ಪಾಷ, ಅಜ್ಮಲ್, ಪ್ರದೀಪ್ ಹಾಗೂ ಎಲ್ಲಾ ಜನಾಂಗದ ಮುಖಂಡರು ಇದ್ದರು.

ವರದಿ: ನಿಂಪು ಬ್ರದರ್ಸ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.