ಕೊಳ್ಳೇಗಾಲ. ಪಟ್ಟಣದ ಪುಟ್ ಬಾತ್ ತೆರವುಗೊಳಿಸುವ ವೇಳೆ ವ್ಯಾಪಾರಿಗಳಿಂದ ಹೈಡ್ರಾಮಾ ನಡೆದಿದ್ದು, ಟಿ.ವಿ ವರದಿಗಾರನ ಮೇಲೆ ಪೆಟ್ರೋಲ್ ಸುರಿದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಜರುಗಿದೆ.
ಪಟ್ಟಣದ ಕುಮಾರ ಎಲೆಕ್ಟ್ರಿಕಲ್ ರಸ್ತೆ, ಚಿನ್ನಬೆಳ್ಳಿ ರಸ್ತೆ, ಎಸ್.ಟಿ ರಸ್ತೆ, ರಾಜ್ ಕುಮಾರ್ ರಸ್ತೆ, ಬಸ್ತೀಪುರ ರಸ್ತೆ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಪುಟ್ಬಾತ್ ತೆರವುಗೊಳಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಪುಟ್ಬಾತ್ ಅಂಗಡಿ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ತೆರವು ಮಾಡಲು ಅಧಿಕಾರಿಗಳ ಬಂದ ವೇಳೆ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಒತ್ತುವರಿಯನ್ನು ತೆರವು ಮಾಡಿಕೊಂಡರು.
ಡಾ.ರಾಜಕುಮಾರ್ ರಸ್ತೆಯಿಂದ ಹಳೇ ಕುರುಬರ ಬೀದಿಗೆ ತೆರಳುವ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಪುಟ್ಬಾತ್ ಅಂಗಡಿಗಳನ್ನು ತೆರವು ಮಾಡಲು ಅಧಿಕಾರಿಗಳು ಬಂದಾಗ ನ್ಯೂ ಮದೀನ ಚಿಕನ್ ಸೆಂಟರ್ ಮಾಲೀಕ ಸೈಯದ್ ಆಸೀಫ್ ಎಂಬಾತ ನನ್ನ ಅಂಗಡಿ ತೆರವು ಮಾಡಿದ್ದದೇ ನಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೆಟ್ರೋಲ್ ಕೈಯಲ್ಲಿ ಹಿಡಿದು ಬೆದರಿಕೆ ಹೊಡುತ್ತಿದ್ದನು. ಈ ವೇಳೆ ನ್ಯೂಸ್ ಗಾಗಿ ಬಂದಿದ್ದ ವರದಿಗಾರ ಬಸಂತ್ ಕುಮಾರ್ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಬಂದ ಚಿಕನ್ ಅಂಗಡಿಯ ಸೈಯದ್ ಆಸೀಫ್ ಎನುವನ್ನು ಪಕ್ಕದಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಹಿಡಿದುಕೊಂಡಾಗ ಬಸಂತ್ ಕುಮಾರ್ ಮೇಲೆ ಹಾಗೂ ಆಹಾರ ನಿರೀಕ್ಷಕ ಚೇತನ್, ಪೌರಯುಕ್ತರು ನಟರಾಜು ಹಾಗೂ ಇನ್ನೀತರ ಮೇಲೆ ಪೆಟ್ರೋಲ್ ಸುರಿದಿತ್ತು.
ನಂತರ ಪೊಲೀಸರು ಆಸೀಫ್ ನನ್ನು ವಶಕ್ಕೆ ಪಡೆದು, ಪೆಟ್ರೋಲ್ ಬಾಟಲ್ ನನ್ನು ಜಪ್ತಿ ಮಾಡಿದರು.
ಮುಂದುವರಿದು, ಕಾರ್ಯಾಚರಣೆ
ಮಾಡಲು ಜೆಸಿಬಿ ಮಿಷನ್ ರಭಸವಾಗಿ ಬಂದಾಗ ಚಿಕನ್ ಅಂಗಡಿ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ ಒಂದು ಕ್ಷಣ ಕಂಬ ಅಲುಗಾಡಿ ನೆರೆದಿದ್ದ ಜನರು ಭಯ ಬೀಳುವಂತಾಯಿತು.
ಸದ್ಯಕ್ಕೆ ಯಾವುದೇ ಹಾನಿಯಾಗದೇ ವಿದ್ಯುತ್ ಕಂಬ ಸಡಿಲಗೊಂಡಿತ್ತು.
ನಂತರ ಹಳೇ ಕುರುಬರ ಬೀದಿಗೆ ತೆರಳು ಮಾರ್ಗದ ಅಂಗಡಿಗಳ ಮುಂದಿನ ಒತ್ತುವರಿ ತೆರವು ಮಾಡಿ, ಕಾರ್ಯಾಚರಣೆಯನ್ನು ಮುಂದುವರೆಸಿದರು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪತ್ರಕರ್ತರ ಜೊತೆ ಆಗಮಿಸಿದ್ದ ಬಸಂತ್ ಕುಮಾರ್ ರನ್ನು ದೂರು ನೀಡದಂತೆ ಮುಸ್ಲಿಂ ಮುಖಂಡರು ಮನವೋಲಿಸಿ ಆಸೀಫ್ ರನ್ನು ವಾಪಸ್ಸು ಕರೆದ್ಯೋದರು.
ಈ ಕಾರ್ಯಾಚರಣೆಯಲ್ಲಿ ನಗರಸಭೆ ಪೌರಯುಕ್ತರು ನಟರಾಜು, ಎಇಇ ಪ್ರಸನ್ನ, ಲಕ್ಷ್ಮೀ, ಮ್ಯಾನೇಜರ್ ಲಿಂಗರಾಜು, ಆಹಾರ ನಿರೀಕ್ಷಕ ಚೇತನ್, ವಿಭೂತಿ ಸೇರಿದಂತೆ ಇತರರು ಇದ್ದರು.
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.