ಕೊಳ್ಳೇಗಾಲ-  ಲಯನ್ಸ್ ಕ್ಲಬ್ ಕೊಳ್ಳೇಗಾಲದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ 
 ಶಿಬಿರದ ಉದ್ಘಾಟನೆಯನ್ನು ಡಾಕ್ಟರ್ ಫ್ರಾನ್ಸು ಜೋಶಿ ನೆರವೇರಿಸಿ ಕಣ್ಣು ಬಹಳ ಅಮೂಲ್ಯವಾದ ಅಂಗ ಹೊಗೆ ಮತ್ತು ದೂಳಿನಿಂದ ಟಿವಿ ಮೊಬೈಲ್ ನಿಂದ ಆದಷ್ಟು ದೂರವಿರಬೇಕೆಂದು ತಿಳಿಸಿದರು ಕಣ್ಣಿನ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕೆಂದರು ಲಯನ್ ಜಿಎಸ್ ಮಹಾದೇವ ಪ್ರಸಾದ್ ಮಾತನಾಡಿ ಇದು ವರವಿಗೆ ಲಯನ್ಸ್ ಕ್ಲಬ್ ವತಿಯಿಂದ ಓ ಪಿ ಡಿ ಸೌಲಭ್ಯದಲ್ಲಿ 1,13,560 ಜನರು ಪ್ರಯೋಜನ ಪಡೆದಿದ್ದಾರೆ ಹಾಗೂ ಇದರ ಖರ್ಚು ವೆಚ್ಚವನ್ನು ನಮ್ಮ ಲಯನ್ ಸದಸ್ಯರೇ ಬರಿಸುತ್ತಾರೆ ಎಂದು ತಿಳಿಸಿದರು ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಎಸ್ ನಾಗರಾಜು ಕೊಂಗರಹಳ್ಳಿ ಮಾತನಾಡಿ ಇದುವರೆಗೆ 230 ಕ್ಯಾಂಪುಗಳಾಗಿವೆ ಹಾಗೂ11156 ಜನರಿಗೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಸೇವೆಯನ್ನ ಸ್ಲಾಗಿಸಿದರು 
 ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪುಟ್ಟ ಮಾದಪ್ಪನವರು ಮಾತನಾಡಿ ಲಯನ್ಸ್ ಕ್ಲಬ್ ಗೆ 50 ವರ್ಷ ತುಂಬಿದ್ದು ಈ ಸಂದರ್ಭದಲ್ಲಿ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದೆ ಇದು ನನ್ನ ಪುಣ್ಯ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು ಒಟ್ಟು 45 ಜನರು ತಪಾಸಣೆಗೆ ಒಳಪಟ್ಟು 35 ಜನರನ್ನ ಕೊಳ್ಳೇಗಾಲದ ಲಯನ್ಸ್ ಕ್ಲಬ್ ಬಸ್ಸಿನಲ್ಲಿ ಬೆಂಗಳೂರು ಲಯನ್ಸ್ ವೆಸ್ಟ್ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಲಯನ್ ಚೆನ್ನಮಾದೇಗೌಡ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಮಾದೇಶ್ ಚಿಕ್ಕಬಸವಯ್ಯ ನಾಗ ಬಸವಲಿಂಗಪ್ಪ ಹಾಗೂ ಶಿಬಿರಾರ್ಥಿಗಳು ಇದ್ದರು.

ವರದಿ - ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.