ಕೊಳ್ಳೇಗಾಲ. ಜಯಕರ್ನಾಟಕ ಸಂಘಟನೆ ಮಧುವನಹಳ್ಳಿ ಗ್ರಾಮ ಘಟಕ ವತಿಯಿಂದ ಭಾನುವಾರ 70 ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.
ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಜಯಕರ್ನಾಟಕ ಸಂಘಟನೆ ಗ್ರಾಮ ಘಟಕ ನೂತನ ನಾಮಫಲಕವನ್ನು ಚಾಮುಲ್ ಅಧ್ಯಕ್ಷರು ನಂಜುಂಡಸ್ವಾಮಿ ಅವರು ಉದ್ಘಾಟನೆ ಮಾಡಿ ಬಳಿಕ ಕನ್ನಡಾಂಬೆ ಭಾವಚಿತ್ರಕ್ಕೆ ಪಷ್ಪಾರ್ಚನೆ ಮಾಡಿ, ಬಳಿಕ ಮಾತನಾಡಿದ ಅವರು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಜಯಕರ್ನಾಟಕ ಸಂಘಟನೆಯ ನಿರ್ಮಾತೃ ಮುತ್ತಪ್ಪ ರೈ ರವರು ಈ ಸಂಘಟನೆಯನ್ನು ಕಟ್ಟಿ ನಾಡಿದಾದ್ಯಂತ ನೆಲ,ಜಲ ಹಾಗೂ ಕನ್ನಡ ಭಾಷೆಯ ಉಳಿಯುವಿಗಾಗಿ ಪರಿಶ್ರಮಿಸಿದಂತಹ ಮಹಾನ್ ವ್ಯಕ್ತಿ ಎಂದರೆ ತಪ್ಪಾಗಲಾರದು ಇಂತಹ ಸಂಘಟನೆ ಗ್ರಾಮ ಮಟ್ಟದಲ್ಲೂ ಕೂಡ ವಿಸ್ತರಣೆಯಾಗಿ ಸೇವೆಗೆ ಮುಂದಾಗಿರುವುದು ನಿಜಕ್ಕೂ ಪ್ರಶಂಸೆಯ ವಿಷಯದಲ್ಲಿ ತಿಳಿಸಿದರು
ಹಾಗೆಯೆ ಕನ್ನಡ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಪ್ರಯತ್ನದಲ್ಲಿ ಜಾಗೃತ ನಾಗರಿಕರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಿಎಸಿಸಿ ಅಧ್ಯಕ್ಷರು ರಮೇಶ್, ಮಧುವನಹಳ್ಳಿ ಗ್ರಾ.ಪಂ ಅಧ್ಯಕ್ಷರು ಸಿದ್ದಪ್ಪ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷರು ದೇವಿಕಾ ವರದರಾಜು, ತಾಲ್ಲೂಕು ಅಧ್ಯಕ್ಷರು ಪ್ರಭುಸ್ವಾಮಿ, ಕೊಳ್ಳೇಗಾಲ ಟೌನ್ ಅಧ್ಯಕ್ಷರು ಸುರೇಶ್, ಜಿಲ್ಲಾ ಉಪಾಧ್ಯಕ್ಷರು ನಾಗೇಂದ್ರ, ಗ್ರಾಮ ಘಟಕ ಅಧ್ಯಕ್ಷರು ಎಸ್.ಸತೀಶ್, ಕಾರ್ಯಾಧ್ಯಕ್ಷ ಮಣಿಕಂಠ, ಉಪಾಧ್ಯಕ್ಷರು ಸಿದ್ದಪ್ಪಸ್ವಾಮಿ, ಗಣೇಶ್, ಖಜಾಂಚಿ ಮಹದೇವಸ್ವಾಮಿ, ಹನೂರು ಅಧ್ಯಕ್ಷರು ಪುಟ್ಟರಾಜು, ಗುಂಡ್ಲುಪೇಟೆ ಅಧ್ಯಕ್ಷರು ಮಂಗಳಮ್ಮ ಹಾಗೂ ಇತರರು ಇದ್ದರು
ವರದಿ: ನಿಂಪು ಬ್ರದರ್ಸ್.
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.